ಗ್ರಾಮಾಂತರ ಸಮುದಾಯ ಸುದ್ದಿ ಸ್ಥಳೀಯ

ಸುರಿಬೈಲ್ ದಾರುಲ್ ಅಶ್-ಅರಿಯ್ಯಾಕ್ಕೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಡಾ.ಅಬ್ದುಲ್ ಶಕೀಲ್ ಭೇಟಿ

ಬಂಟ್ವಾಳ: ಮರ್ಹೂಂ ಸುರಿಬೈಲ್ ಉಸ್ತಾದ್ ಸ್ಥಾಪಿತ ದಾರುಲ್ ಅಶ್- ಅರಿಯ್ಯಾ ಎಜ್ಯುಕೇಶನ್ ಸೆಂಟರ್ ಸುರಿಬೈಲ್ ವಿದ್ಯಾಸಂಸ್ಥೆಗೆ ನೂತನ ‌ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಡಾ.ಅಬ್ದುಲ್ ಶಕೀಲ್ ಭೇಟಿ ನೀಡಿದರು‌.
ಸಂಸ್ಥೆಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ ಸ್ವಾಗತಿಸಿದರು.

ಸಂಸ್ಥೆಯ ಸ್ಥಾಪಕ ಮರ್ಹೂಂ ಸುರಿಬೈಲ್ ಉಸ್ತಾದ್ ರವರ ಮಕ್ಬರ ಝೀಯರತ್ ಗೈದರು. ದಾರುಲ್‌ ಅಶ್-ಅರಿಯ್ಯಾ ಸಂಸ್ಥೆ ವತಿಯಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ಅಬ್ದುಲ್ ಶಕೀಲ್ ರವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಡಾ. ಅಬ್ದುಲ್ ಶಕೀಲ್ ಮಾತನಾಡಿ, ಧರ್ಮಗುರುಗಳು ಲೌಕಿಕ ಹಾಗೂ ಧಾರ್ಮಿಕ ವಿದ್ಯಾಭ್ಯಾಸಕ್ಕೆ ಸಮಾನ ಮಹತ್ವವನ್ನು ನೀಡುವುದರಿಂದ ಇಂದು ಬಡ ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲೂ ಮಿಂಚಲು ಸಾಧ್ಯವಾಗಿದೆ. ಓರ್ವ ಮುಸಲ್ಮಾನನಿಗೆ ಎರಡು ರೀತಿಯ ವಿದ್ಯೆ ಅತ್ಯಗತ್ಯ ಎಂದು ಹೇಳಿದರು.

ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷರಾದ ಬೊಳ್ಮಾಲ್ ಉಸ್ತಾದ್, ಅಬ್ದುಲ್ಲಾ ಮುಸ್ಲಿಯಾರ್ ದುಬೈ ಉಪಸ್ಥಿತರಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಖಾಸಗಿ ಪೆಟ್ರೋಲಿಯಂ ತೈಲ ಘಟಕದಲ್ಲಿ ಆನ್‌ಸೈಟ್ ತುರ್ತು  ಅಗ್ನಿಶಮನದ ಅಣುಕು ಕಾರ್ಯಾಚರಣೆ

Upayuktha

ಅರೆಹೊಳೆ ಪ್ರತಿಷ್ಠಾನದ ಕಲಾವಿದರಿಂದ ‘ಕಂಸಾಯಣ’ ನಾಟಕ ಮೊದಲ ಪ್ರದರ್ಶನ ಫೆ.1ಕ್ಕೆ

Upayuktha

ಆಳ್ವಾಸ್‌ ಕಾಲೇಜಿನಲ್ಲಿ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ

Upayuktha