ಉಜಿರೆ: ಉಜಿರೆಯ ಎಸ್.ಡಿ.ಎಂ ಕಾಲೇಜು ಹಾಗೂ ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಜನವರಿ 22ರಿಂದ ಫೆಬ್ರವರಿ 4ರವರೆಗೆ ಮೂಲ ವಿಜ್ಞಾನಗಳ ಕುರಿತ ವೆಬಿನಾರ್ ಸರಣಿ ಕಾರ್ಯಕ್ರಮ ನಡೆಯಲಿದೆ. ವೆಬಿನಾರ್ ಸರಣಿಯು ಆನ್ಲೈನ್ ವೇದಿಕೆಯ ಮುಖಾಂತರ ನಡೆಯಲಿದೆ.
ಜೆನ್, ಜೆನೆಟಿಕ್ಸ್, ಕಪ್ಪುರಂಧ್ರಗಳ ವಿಸ್ಮಯ ಲೋಕ, ಗಣಿತದ ಕೌಶಲ್ಯಗಳು, ನ್ಯೂಕ್ಲಿಯರ್ ಎನರ್ಜಿ, ಬದುಕಿನಲ್ಲಿ ರಸಾಯನಶಾಸ್ತ್ರದ ಮಹತ್ವ, ಸಸ್ಯಪ್ರಬೇಧಗಳ ವಿಸ್ಮಯ ಜಗತ್ತು, ಅಂಕೆಯೊಳಗಿನ ಅನಂತ, ಸಮಾಜ ಕಲ್ಯಾಣಕ್ಕಾಗಿ ಬಯೋಟೆಕ್ನಾಲಜಿ, ಬಯಾಲಜಿಯ ಪರಿಕಲ್ಪನೆ ಕುರಿತು ಡಾ. ಮಾರುತಿ ಕೆ.ಆರ್, ಡಾ.ಎ.ಪಿ.ರಾಧಾಕೃಷ್ಣ, ಡಾ.ಪ್ರದೀಪ್ ಸಿ.ಆರ್, ಡಾ.ಶ್ರೀಪತಿ ಪುಂಚಿತ್ತಾಯ, ಡಾ.ಬಬಿತಾ ಕೆ.ಎಸ್, ಡಾ.ಕುಮಾರ ಹೆಗ್ಡೆ, ಪ್ರೊ.ಟಿ.ಎನ್.ಕೇಶವ್, ಅಭಿಜಿತ್ ಬಡಿಗೇರ್, ಗಣೇಶ್ ವಿ.ಶಿಂಧೆ ವಿಚಾರಗಳನ್ನು ಮಂಡಿಸಲಿದ್ದಾರೆ.
ಪ್ರತಿದಿನ ಮಧ್ಯಾಹ್ನ 3ರಿಂದ 4.15ರವರೆಗೆ ವೆಬಿನಾರ್ ಕಾರ್ಯಕ್ರಮ ಏರ್ಪಡಲಿದೆ. ಉಪನ್ಯಾಸಕರು, ಪ್ರೌಢ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಲಿಂಕ್ ಮೂಲಕ ವೆಬಿನಾರ್ನಲ್ಲಿ ಭಾಗವಹಿಸಬಹುದಾಗಿದೆ. ಪಿಲಿಕುಳ ಪ್ರಾದೇಶಿಕ ವಿಜ್ಞಾನಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್, ಸಂಯೋಜಕರಾದ ಎಸ್ಎನ್ ಕಾಕತ್ಕರ್ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ ಎಸ್. ವೆಬಿನಾರ್ ಸರಣಿಯಲ್ಲಿ ಉಪಸ್ಥಿತರಿರಲಿದ್ದಾರೆ.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ