ಜಿಲ್ಲಾ ಸುದ್ದಿಗಳು ಪ್ರಮುಖ

ಬೇಕಲಕೋಟೆ: ಬಹು ನಿರೀಕ್ಷಿತ ಲೈಟ್‌ ಆ್ಯಂಡ್‌ ಸೌಂಡ್‌ ಶೋ ಇಂದು ಸಂಜೆ ಉದ್ಘಾಟನೆ

ಕಾಸರಗೋಡಿನ ಐತಿಹಾಸಿಕ ಪ್ರವಾಸಿ ತಾಣ ಬೇಕಲ ಕೋಟೆ (ಚಿತ್ರ: ಕೇರಳ ಪ್ರವಾಸೋದ್ಯಮ ಇಲಾಖೆ)

ಕಾಸರಗೋಡು:

ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯಲ್ಲಿ ಬಹು ನಿರೀಕ್ಷಿತ ಬೆಳಕು ಮತ್ತು ಧ್ವನಿ ಪ್ರದರ್ಶನ (ಲೈಟ್‌ ಆ್ಯಂಡ್‌ ಸೌಂಡ್‌ ಶೋ) ಇಂದು ಉದ್ಘಾಟನೆಗೊಳ್ಳಲಿದೆ. ಪೂರ್ವ ಯೋಜನೆಯಂತೆ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಇದು ಉದ್ಘಾಟನೆಗೊಳ್ಳಬೇಕಿತ್ತು. ಆದರೆ ನಾನಾ ಕಾರಣಗಳಿಂದ ಅಂದು ನೆರವೇರಲಿಲ್ಲ.

ಇಂದು ಸಂಜೆ 6:30ಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸರಕಾರದ ಪ್ರವಾಸೋದ್ಯಮ ಮತ್ತು ಸಹಕಾರಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಈ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಕೆ. ಕುಞಿರಾಮನ್‌ ಅಧ್ಯಕ್ಷತೆ ವಹಿಸಲಿದ್ದಾರೆ.

4 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದೆ.

ಬೆಳಕಿನ ವರ್ಣ ಚಿತ್ತಾರ ಮತ್ತು ಇಂಪಾದ ಸಂಗೀತ ಕಾರ್ಯಕ್ರಮವು ಕೇರಳ ಪ್ರವಾಸೋದ್ಯಮ ಇಲಾಖೆ ಮೂಲಕ ಆಯೋಜನೆಗೊಳ್ಳಲಿದೆ. ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದ್ದು, ಬೇಕಲ ಕೋಟೆ ವರ್ಣ ಮತ್ತು ಶಬ್ದ ಚಿತ್ತಾರಕ್ಕೆ ಸಜ್ಜಾಗಿದೆ. ಶಬ್ದ ವರ್ಣಚಿತ್ತಾರಕ್ಕೆ ಪೂರಕವಾದ ವೇದಿಕೆ ಸಜ್ಜಾಗಿದ್ದು, ವಿದ್ಯುತ್‌ ಪೂರೈಕೆಗೆ ಅಗತ್ಯವಾಗಿರುವ ಟ್ರಾನ್ಸ್‌ಫಾರ್ಮರ್‌ ಸ್ಥಾಪನೆಗೆ ಅನುಮತಿ ಲಭಿಸಿದ್ದು, ಒಟ್ಟು 6.6 ಲಕ್ಷ ರೂ.ಗಳನ್ನು ಅನುಮೋದಿಸಲಾಗಿದೆ.

ಲೆ„ಟ್‌ ಆ್ಯಂಡ್‌ ಸೌಂಡ್‌ ಶೋ ಮೂಲಕ 400 ವರ್ಷಗಳ ಹಿಂದಿನ ಉತ್ತರ ಮಲಬಾರು ಪ್ರಾಂತ್ಯದ ಚರಿತ್ರೆ, ದಕ್ಷಿಣ ಕನ್ನಡದ ಭಾಗವಾಗಿದ್ದ ಬೇಕಲ ಸೀಮೆಯ ಐತಿಹಾಸಿಕ ಚಿತ್ರಣವನ್ನು ವರ್ಣ ಮತ್ತು ಶಬ್ದ ಚಿತ್ತಾರದ ಮೂಲಕ ವೀಕ್ಷಕರಿಗೆ ತೋರಿಸುವ ಉದ್ದೇಶವಿರಿಸಲಾಗಿದೆ. ಉತ್ತರ ಕೇರಳದ ಚರಿತ್ರೆ ಮತ್ತು ಕೇರಳದ ಅತೀ ದೊಡ್ಡದಾದ ಬೇಕಲ ಕೋಟೆಯ ನಿರ್ಮಾಣದ ಬಗೆಗಿನ ಮಾಹಿತಿಯನ್ನು ಕೇಂದ್ರ ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಪುರಾವಸ್ತು ಇಲಾಖೆ ಅಧಿಕಾರಿಗಳು ಇದನ್ನು ಪರೀಕ್ಷಿಸಿ, ಅಂಗೀಕರಿಸಲಿದ್ದಾರೆ. ಇತಿಹಾಸ ತಜ್ಞರಾದ ಡಾ| ಸಿ. ಬಾಲನ್‌, ಡಾ| ಎಂ.ಜಿ.ಎಸ್‌. ನಾರಾಯಣನ್‌ ಎಂಬವರು ಬೇಕಲ ಕೋಟೆ ತತ್ಸಂಬಂಧಿ ಇತಿಹಾಸದ ಬಗ್ಗೆ ಕೂಲಂಕಷ ಮಾಹಿತಿಯನ್ನು ಸಂಗ್ರಹಿಸಿ ನೀಡಿದ್ದಾರೆ. ಬೇಕಲ ಕೋಟೆಯ ಚರಿತ್ರೆಯನ್ನು ಸ್ಕ್ರೀನಿಂಗ್‌ಗೆ ಒಳಪಡಿಸಿದ ಅನಂತರ ಪ್ರಸಿದ್ಧ ಸಿನಿಮಾ ನಟನ ಧ್ವನಿಯ ಮೂಲಕ ಕೋಟೆ ಇತಿಹಾಸ, ಆ ಕಾಲಘಟ್ಟದಲ್ಲಿ ನಡೆದ ಯುದ್ಧಗಳು, ರಾಯರ ಸಾಧನೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಅನಂತರ ಕೋಟೆಯೊಳಗೆ ರಾತ್ರಿ ವೇಳೆ ಧ್ವನಿ ಸುರುಳಿ ವರ್ಣ ಚಿತ್ತಾರದ ಮೂಲಕ ಕೋಟೆಯ ಇತಿಹಾಸವನ್ನು ಬಿಂಬಿಸುವ ಕಾರ್ಯ ನಡೆಯಲಿದೆ.

ಪ್ರಥಮ ಹಂತದಲ್ಲಿ ಪರೀಕ್ಷಣಾರ್ಥ ಲೈಟ್‌ ಆ್ಯಂಡ್‌ ಶೋ ನಡೆಯಲಿದ್ದು, ನಂತರ ವೀಕ್ಷಕರಿಗೆ ಅನುಕೂಲಕರ ಆಸನ ವ್ಯವಸ್ಥೆಗಳನ್ನು ಕೊಡಮಾಡಲಾಗುವುದು ಎನ್ನಲಾಗಿದೆ. ಒಟ್ಟು 45 ನಿಮಿಷದ ಲೈಟ್‌ ಅಂಡ್‌ ಸೌಂಡ್‌ ಶೋವಿನ 60 ಶೇ. ಭಾಗ ಪೂರ್ಣಗೊಂಡಿದೆ. ಒಂದು ಸಮಯಕ್ಕೆ ಒಟ್ಟು 200 ಮಂದಿ ವೀಕ್ಷಕರು ಕುಳಿತು ನೋಡಲು ಅನುಕೂಲವಾಗುವಂತಹ ಸೌಕರ್ಯವನ್ನು ಮಾಡಲಾಗುವುದು ಎಂದು ಲೈಟ್‌ ಆ್ಯಂಡ್‌ ಸೌಂಡ್‌ ಆಯೋಜಕರು ತಿಳಿಸಿದ್ದಾರೆ.

ಭಾರತೀಯ ವೀರ ಅರಸರ ಜೀವನ ಚರಿತ್ರೆ ಹಾಗೂ ಕೋಟೆಯ ಒಳಹೊರಗಿನ ಕತೆಗಳನ್ನು, ಕೆಲವೇ ನಿಮಿಷಗಳಲ್ಲಿ ಅರ್ಥಪೂರ್ಣವಾಗಿ, ಮಾಹಿತಿಪೂರ್ಣ ಚಿತ್ರಣವಾಗಿ ಪ್ರೇಕ್ಷಕರ ಮುಂದಿಡಲಾಗುವುದು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕೊರೊನಾ ಸವಾಲು: ಕನ್ನಡದ 8 ಪ್ರಮುಖ ಪತ್ರಿಕೆಗಳಲ್ಲಿ ಒಂದೇ ಸಂಪಾದಕೀಯ

Upayuktha

39ನೇ ಎಬಿವಿಪಿ ರಾಜ್ಯ ಸಮ್ಮೇಳನ ಉದ್ಘಾಟನೆ: ಅಕ್ಷರಸಂತ ಪದ್ಮಶ್ರೀ ಹಾಜಬ್ಬಗೆ ಸಮ್ಮಾನ

Upayuktha

ಗಡಿಗಳಲ್ಲಿ ಸಂಚಾರ ನಿರ್ಬಂಧಿಸುವಂತಿಲ್ಲ: ಕೇಂದ್ರ ಕಟ್ಟುನಿಟ್ಟಿನ ಸೂಚನೆ

Upayuktha News Network

Leave a Comment