ಕಲೆ-ಸಾಹಿತ್ಯ ಗ್ರಾಮಾಂತರ ಸ್ಥಳೀಯ

ಬೆಳ್ತಂಗಡಿ: 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಉಧ್ಘಾಟನಾ ಕಾರ್ಯಕ್ರಮ

ಪೆರಿಂಜೆ: ಬೆಳ್ತಂಗಡಿ ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಉಧ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು.

ಹೊಸಂಗಡಿ ಗ್ರಾಮದ ಪೆರಿಂಜೆ ಪಡ್ಡ್ಯಾರಬೆಟ್ಟ ಸಂತೃಪ್ತಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮ್ಮೇಳನದ ಸಂಯೋಜನಾ ಸಮಿತಿ ಗೌರವಾಧ್ಯಕ್ಷ ಎ. ಜೀವಂಧರ್ ಕುಮಾರ್ ಪಡ್ಯೋಡಿಗುತ್ತು, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಸದಸ್ಯ ಓಬಯ್ಯ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಬಿ.ಯಶೋವರ್ಮ, ಸಮ್ಮೇಳನದ ಸಂಯೋಜನಾ ಸಮಿತಿ ಅಧ್ಯಕ್ಷ ಪೆರಿಂಜೆಗುತ್ತು ಪಿ.ಜಯರಾಜ್ ಕಂಬಳಿ, ಕಾರ್ಯಾಧ್ಯಕ್ಷ ಹಾಗೂ ಜಿ.ಪಂ ಸದಸ್ಯ ಪಿ.ಧರಣೇಂದ್ರ ಕುಮಾರ್, ಹೊಸಂಗಡಿ ಗ್ರಾ.ಪಂ ಅಧ್ಯಕ್ಷ ಕರುಣಾಕರ ಪೂಜಾರಿ, ರಾಮಕೃಷ್ಣ ಚೊಕ್ಕಾಡಿ, ಅಶ್ರಫ್ ಅಲಿಕುಂಞಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀನಾಥ್, ಸೋಮಶೇಖರ್ ಶೆಟ್ಟಿ ಉಜಿರೆ, ಸ್ವಾಗತ ಸಮಿತಿ ಪ್ರಮುಖ್ ವಿಕಾಸ್ ಜೈನ್ ಬಾಲ್ನಗುತ್ತು, ಸಂಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿದ್ಯಾನಂದ ಜೈನ್ ಎರ್ಮೋಡಿ, ಕಾರ್ಯದರ್ಶಿ ಮುಕುಂದ ಚಂದ್ರ ಎಲ್.ಎನ್, ಜೊತೆಕಾರ್ಯದರ್ಶಿ ಸುಧಾಕರ ಶೆಟ್ಟಿ, ಕೋಶಾಧಿಕಾರಿ ಎಚ್ ಆಲಿಯಬ್ಬ, ಪಿ.ಡಿ.ಒ ಗಣೇಶ್ ಶೆಟ್ಟಿ, ಸ್ಮರಣ ಸಂಚಿಕೆ ಸಮಿತಿಯ ಪ್ರಮುಖ ಶಂಕರ್ ಭಟ್ ಬಾಲ್ಯ, ಮಾಧ್ಯಮ ಪ್ರಚಾರ ಸಮಿತಿ ಪ್ರಮುಖ್ ಹರೀಶ್ ಕೆ.ಆದೂರು, ಪ್ರಧಾನ ಸಂಚಾಲಕ ಇಸ್ಮಾಯಿಲ್ ಕೆ ಪೆರಿಂಜೆ,ಹೊಸಂಗಡಿ ಗ್ರಾ.ಪಂ. ಸದಸ್ಯರುಗಳು, ಕಾರ್ಯಕ್ರಮ ಸಂಯೋಜನಾ ಸಮಿತಿ ಪ್ರಮುಖ್ ಮಹಾವೀರ್ ಜೈನ್, ರಾಜೇಶ್ ನೆಲ್ಲಿಯಾಡಿ, ಶರ್ಮಿತ್ ಎರ್ಮೋಡಿ, ರೋಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Related posts

ಎಸ್‍ಕ್ಯೂಲೆಂಟ್ ಗಾಲ 2020: ಆಳ್ವಾಸ್‌ನಲ್ಲಿ ಅಂತರ್ ಕಾಲೇಜು ಫುಡ್ ಫೆಸ್ಟ್

Upayuktha

ಸಮುದಾಯ ಸಹಾಯ ಕೇಂದ್ರ ರೋಗಿಗಳಿಗೆ ನೆರವಾಗಲಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Upayuktha

ಕೆಎಸ್‍ಆರ್‌ಟಿಸಿಯಲ್ಲಿ ತಾಂತ್ರಿಕ ತರಬೇತಿಗೆ ಅರ್ಜಿ ಆಹ್ವಾನ

Upayuktha