ಕ್ಯಾಂಪಸ್ ಸುದ್ದಿ ಯೂತ್ ಶಿಕ್ಷಣ ಸ್ಥಳೀಯ

ಬೆಳ್ತಂಗಡಿ: ಎಕ್ಸೆಲ್ ಶಿಕ್ಷಣ ಸಂಸ್ಥೆಯ ನೂತನ ಪ್ರಯೋಗಾಲಯ ಕಟ್ಟಡ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ: ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣಕ್ರಾಂತಿ ಮಾಡಿದ ಎಕ್ಸೆಲ್ ಶಿಕ್ಷಣ ಸಂಸ್ಥೆಯ ನೂತನ ಶೈಕ್ಷಣಿಕ ಕಾರ್ಯಚಟುವಟಿಗಳ ಮತ್ತು ಪ್ರಯೋಗಾಲಯಗಳ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಇಂದು (ಫೆ.22) ಎಕ್ಸೆಲ್ ಪದವಿ ಪೂರ್ವ ಕಾಲೇಜು ಪ್ರಾಂಗಣದಲ್ಲಿ ನಡೆಯಿತು.

ನೂತನ ಕಟ್ಟಡವನ್ನು ಸಹಕಾರ ರತ್ನ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಗುರುವಾಯನಕೆರೆ ಇನ್‌ಫಿನಿಟಿ ಲರ್ನಿಂಗ್ ಫೌಂಡೇಷನ್ ಅಧ್ಯಕ್ಷ ಸುಮತ್ ಕುಮಾರ್ ಜೈನ್ ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿಗಳಾಗಿ  ಭಾಗವಹಿಸಿ ಕಾಲೇಜು ಲಾಂಛನವನ್ನು ಬಿಡುಗಡೆಗೊಳಿಸಿದರು.
ಶ್ರೀ ಧ.ಮಂ.ಸಂಸ್ಥೆಗಳ ಉಪಾಧ್ಯಕ್ಷ ಪ್ರೋ.ಎಸ್.ಪ್ರಭಾಕರ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ ಶೆಟ್ಟಿ, ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಆಶಾಲತಾ, ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಬರೋಡಾ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಬಿ.ಗಣೇಶ್ ಭಟ್ ಸಮತಾ ಬೆಳ್ತಂಗಡಿ, ಬೆಳ್ತಂಗಡಿ ಉದ್ಯಮಿ ಶಮಂತ್ ಕುಮಾರ್ ಜೈನ್  ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು.

ಗುರುವಾಯನಕೆರೆ ಇನ್‌ಫಿನಿಟಿ ಲರ್ನಿಂಗ್ ಫೌಂಡೇಷನ್ ಕಾರ್ಯದರ್ಶಿ ಅಭಿರಾಮ್ ಬಿ.ಎಸ್, ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕಾರ್ತಿಕೇಯ ಎಂ.ಎಸ್, ಸಿಬ್ಬಂದಿ ವರ್ಗ ಹಾಗೂ ಆಡಳಿತ ಸದಸ್ಯರು , ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಸುಮತ್ ಕುಮಾರ್ ಜೈನ್ ಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

Related posts

ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ, ದ.ಕದಲ್ಲಿ ಪರೀಕ್ಷೆ ಬರೆಯಲಿರುವ 30,835 ವಿದ್ಯಾರ್ಥಿಗಳು

Upayuktha

ಶಾಸ್ತ್ರೀಯ ಮತ್ತು ಜಾನಪದ ನೃತ್ಯ ತರಬೇತಿ ತರಗತಿ ಜ.5ಕ್ಕೆ ಉದ್ಘಾಟನೆ

Upayuktha

ವಿಪತ್ತು ನಿರ್ವಹಣೆಗೆ ಬದ್ಧತೆ ಬೇಕು: ಸಂಜೀವ ಕುಮಾರ್

Upayuktha