ಇತರ ಕ್ರೀಡೆಗಳು ಕ್ರೀಡೆ ಜಿಲ್ಲಾ ಸುದ್ದಿಗಳು

ಫೆ.20: ಗುರುವಾಯನಕೆರೆಯಲ್ಲಿ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

ಬೆಳ್ತಂಗಡಿ: ರಾಕ್‌ಜೆಮ್ ಗುರುವಾಯನಕೆರೆ ವತಿಯಿಂದ ಮೊದಲ ಬಾರಿಗೆ ಜಿಲ್ಲಾ ಮಟ್ಟದ ದೇಹಧಾಡ್ಯ ಸ್ಪರ್ಧೆ ಏರ್ಪಡಿಸಲಾಗಿದೆ.

ಫೆ.20ರಂದು ಸಂಜೆ 6ಕ್ಕೆ ಗುರುವಾಯನಕೆರೆ ಫಣತೀರ್ ಮಾಲ್‌ನಲ್ಲಿ ದೇಹಧಾರ್ಢ್ಯ  ಸ್ಪರ್ಧೆ ನಡೆಯಲ್ಲಿದ್ದು, ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ಸುಮಾರು 250 ಬಾಡಿ ಬಿಲ್ಡರ್‌ಗಳು ಪಾಲ್ಗೊಳ್ಳಲಿದ್ದಾರೆ.

ಈ ಕುರಿತು ಇಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ರಾಕ್‌ಜೆಮ್ ನ ನಿರ್ದೇಶಕ ನವಾಝ್ ಶರೀಫ್ ಕಟ್ಟೆ, ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ಸುಮಾರು 250 ಬಾಡಿ ಬಿಲ್ಡರ್‌ಗಳು ಪಾಲ್ಗೊಳ್ಳಲಿದ್ದಾರೆ.

10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ರೂ.2ಲಕ್ಷ ನಗದು ಮತ್ತು ಟ್ರೋಫಿಯನ್ನು ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಇನ್ನು ಗುರುವಾಯನಕೆರೆ ರಾಕ್‌ಜೆಮ್‌ನಲ್ಲಿ ತರಬೇತಿ ಪಡೆದ 4ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಈ ಸ್ಪರ್ಧೆಯನ್ನು ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್ ರವರು ಉದ್ಘಾಟಿಸಲಿದ್ದಾರೆ. ಶಾಸಕ ಹರೀಶ್ ಪೂಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪಾಲುದಾರರಾದ ಮಸೂದ್, ಶಮೀರ್, ಬಾಡಿ ಬಿಲ್ಡರ್ ಗಳಾದ ಸೃಜನ್ ರೈ, ಅನ್‌ಸಾಫ್, ಬದ್ರುದ್ದೀನ್ ಉಪಸ್ಥಿತರಿದ್ದರು

Related posts

ಕೃಷಿಯಲ್ಲಿ ಬಾತುಕೋಳಿ ಬಳಕೆ: ಕೀಟಗಳ ನಿಯಂತ್ರಣಕ್ಕೆ ಜೈವಿಕ ವಿಧಾನ

Upayuktha

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ “ಪೌರ ರಕ್ಷಣಾ ಪಡೆ’ ಅಸ್ತಿತ್ವಕ್ಕೆ

Upayuktha

ದ.ಕ ಗಡಿಯಲ್ಲಿ ಕಡ್ಡಾಯ ಕೋವಿಡ್ ತಪಾಸಣೆ ತೀರ್ಮಾನ ಹಿಂಪಡೆಯಿರಿ: ಹರ್ಷಾದ್ ವರ್ಕಾಡಿ ಆಗ್ರಹ

Upayuktha