ಗ್ರಾಮಾಂತರ ಪ್ರಮುಖ ಸ್ಥಳೀಯ

ಮ.ಗಾಂ.ರಾ. ಗ್ರಾ.ಉದ್ಯೋಗ ಖಾತರಿ ಯೋಜನೆಯಡಿ ಶೇ. 100 ಪ್ರಗತಿ ಸಾಧಿಸಿದ ಬಂದಾರು ಗ್ರಾಮ ಪಂಚಾಯತ್

ಬಂದಾರು: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶೇ. 100 ಪ್ರಗತಿ ಸಾಧಿಸಿ ಅತ್ಯುತ್ತಮ ಸಾಧನೆಗೈದ ಬಂದಾರು ಗ್ರಾಮ ಪಂಚಾಯತ್ ಗೆ ಉಜಿರೆಯ ಶಾರದಾ ಮಂಟಪದಲ್ಲಿ ಏ.20ರಂದು ನಡೆದ ತಾಲೂಕು ಮಟ್ಟದ ಜಲಶಕ್ತಿ ಅಭಿಯಾನ ಕಾರ್ಯಕ್ರಮದಲ್ಲಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಶಾಸಕ ಹರೀಶ್ ಪೂಂಜ ಅವರು, ಬಂದಾರು ಗ್ರಾಮ ಪಂಚಾಯತದ ಅಧ್ಯಕ್ಷೆ ಪರಮೇಶ್ವರಿ ಕೆ ಗೌಡ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ರವರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.

ವಿಧಾನ ಪರಿಷತ್ ಶಾಸಕ ಕೆ ಪ್ರತಾಪಸಿಂಹ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯರಗಳಾದ ಕೊರಗಪ್ಪ ನಾಯ್ಕ, ಸೌಮ್ಯಲತಾ ಜಯಂತ್,ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಂದಾರು ಗ್ರಾ.ಪಂ ಉಪಾಧ್ಯಕ್ಷ ಗಂಗಾಧರ, ಗ್ರಾ.ಪಂ. ಸದಸ್ಯರುಗಳಾದ ದಿನೇಶ್ ಗೌಡ ಖಂಡಿಗ, ಬಾಲಕೃಷ್ಣ ಗೌಡ, ಚೇತನ್ ಗೌಡ, ಮೋಹನ್ ಗೌಡ, ಶಿವ ಗೌಡ ಹೇವ, ಸುಚಿತ್ರ, ಪವಿತ್ರ, ಭಾರತಿ, ಅನಿತಾ, ವಿಮಲಾ, ಪುಷ್ಪ್ಪಾವತಿ, ಶಿವಪ್ರಸಾದ್, ಮಂಜುಶ್ರೀ, ಶಾಂತ ಹಾಗೂ ಗ್ರಾ.ಪಂ ಸಿಬ್ಬಂದಿವರ್ಗವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts

ಪುಲ್ವಾಮಾ ಉಗ್ರ ದಾಳಿಗೆ ಒಂದು ವರ್ಷ: ಹುತಾತ್ಮ ಯೋಧರಿಗೊಂದು ಶ್ರದ್ಧಾ ನಮನ

Upayuktha

ಸೈನಿಕರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ : ಡಾ. ಮನಮೋಹನ ಎಂ

Upayuktha

ಕಿಶೋರ್ ಕುಮಾರ್ ಕೊಡ್ಗಿ ಕ್ಯಾಂಪ್ಕೊದ ನೂತನ ಅಧ್ಯಕ್ಷ

Upayuktha News Network