ಗ್ರಾಮಾಂತರ ಪ್ರಮುಖ ಸ್ಥಳೀಯ

ಕೊಕ್ಕಡ: ಹೈಮಾಸ್ಟ್ ದೀಪ ಉದ್ಘಾಟನೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಮುಖ್ಯ ದ್ವಾರದ ಬಳಿ ಹಾಗೂ ಸೌತಡ್ಕ ಗೋಶಾಲೆಯ ಬಳಿ ನೂತನವಾಗಿ ಅಳವಡಿಸಲಾದ ಹೈಮಾಸ್ಟ್ ದೀಪಗಳನ್ನು ಶಾಸಕ ಹರೀಶ್ ಪೂಂಜ ಏ.6 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ತೋಡ್ತಿಲ್ಲಾಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಹರೀಶ್ ರಾವ್ ಮುಂಡ್ರುಪ್ಪಾಡಿ, ಆರ್‌ಎಸ್‌ಎಸ್ ಮುಖಂಡ ಕೃಷ್ಣ ಭಟ್, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಕೊಕ್ಕಡ ಗ್ರಾ.ಪಂ ಅಧ್ಯಕ್ಷ ಯೋಗೀಶ ಆಲಂಬಿಲ, ಪಿಡಬ್ಲ್ಯೂಡಿ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಅರಣ್ಯ ಇಲಾಖೆಯ ಶಿವಪ್ರಸಾದ್, ಚಾರ್ಟೆಡ್ ಎಕೌಂಟೆಂಟ್ ಶ್ರೀಕೃಷ್ಣ, ಬಜರಂಗದಳ ಪುತ್ತೂರು ಜಿಲ್ಲಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಪಂಚಾಯತ್ ಸದಸ್ಯರುಗಳಾದ ಪ್ರಭಾಕರ ಗೌಡ, ಶ್ರೀಮತಿ ಬೇಬಿ, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಜನಾರ್ದನ ಕೆ.ಪಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ  ಪ್ರಶಾಂತ್ ಪಿ ಪೂವಾಜೆ, ಕೆ. ನವೀನ್ ಕಜೆ ಪಟ್ಟೂರು, ಪುರಂದರ ಕೆ ಕಡೀರ ಕೊಕ್ಕಡ, ಶ್ರೀಮತಿ ಯಶೋಧ ಶಬರಾಡಿ, ಶ್ರೀಮತಿ ಹೇಮಾವತಿ ಸಂಕೇಶ, ವಿಠಲ ಕೆ , ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

 

Related posts

ಚಂದನ ಸಾಹಿತ್ಯ ವೇದಿಕೆ ; ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮ

Harshitha Harish

ಪ್ರಥಮ ಚಿಕಿತ್ಸೆ ಸಂದರ್ಭದಲ್ಲಿ ಮೊಬೈಲ್ ಬಳಸಬಾರದು: ರೋ. ಕ್ಸೇವಿಯರ್ ಡಿಸೋಜಾ

Upayuktha

ಉಪ್ಪಿನಂಗಡಿ ಬಳಿ ಅಪಘಾತ: ಬುಲೆಟ್ ಟ್ಯಾಂಕರ್‌ನಿಂದ ಭಾರೀ ಪ್ರಮಾಣದ ಅನಿಲ ಸೋರಿಕೆ

Upayuktha