ಗ್ರಾಮಾಂತರ ಪ್ರಮುಖ ಸ್ಥಳೀಯ

ಬೆಳ್ತಂಗಡಿ ಪ.ಪಂ ಯಲ್ಲಿ ಹತ್ತಾರು ಸಮಸ್ಯೆಗಳು: ಪರಿಹಾದ ನೀಡದ ಅಧಿಕಾರಿಗಳ ನಡೆ ವಿರುದ್ಧ ಪ.ಪಂ ಸದಸ್ಯರ ಆಕ್ರೋಶ

ಬೆಳ್ತಂಗಡಿ: ಸಂತಕಟ್ಟೆ  ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಕಟ್ಟಡಗಳ ಕಾಮಗಾರಿ ಕಳಪೆಯಾಗಿದ್ದು, ಜೂನಿಯರ್ ಕಾಲೇಜು ಸಾಮೀಪ್ಯವಿರುವ ನೀರಿನ ಪೈಪ್ ನಿಂದ ದುರ್ವಾಸನೆ ಬರುತ್ತಿದೆ. ಅಲ್ಲದೇ ನಗರದಲ್ಲಿ ಕಾಮಗಾರಿ ಕೆಲಸಗಳು ಕುಠಿಂತವಾಗಿ ಸಾಗುತ್ತಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಬರುವ ನಾಲ್ಕು ಕೆರೆಗಳ ಒತ್ತುವರಿ ತೆರವು ಮಾಡುವಂತೆ ಆಗ್ರಹ ಕೇಳಿ ಬರುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದು, ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಪ.ಪಂ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮಾ.25ರಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ನಲ್ಲಿ ಅಧ್ಯಕ್ಷೆ ರಜನಿ ಕುಡ್ಕ ಅಧ್ಯಕ್ಷತೆಯಲ್ಲಿ ನಡೆದ ನಡೆದ ಸಾಮಾನ್ಯ ಸಭೆಯಲ್ಲಿ ತೆರಿಗೆ ಪರಿಷ್ಕರಣೆಗೆ ಮನವಿ, ಬಾಡಿಗೆ ಲೈಸನ್ಸ್ ನೀಡಲು ವಿನಾಯಿತಿಗೆ ಮನವಿ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಒತ್ತಾಯ ಒಳಗೊಂಡಂತೆ ಬೆಳ್ತಂಗಡಿ ಪಪಂ ವ್ಯಾಪ್ತಿಯಲ್ಲಿ ಹತ್ತಾರು ಸಮಸ್ಯೆಗಳಿದ್ದು, ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಸಡ್ಡೆ ಮನೋಭಾವ ತೋರುತ್ತಿದ್ದು, ಅಧಿಕಾರಿಗಳ ನಡೆ ವಿರುದ್ಧ ಸದಸ್ಯರು ಅಸಮಾಧಾನ ಹೊರಹಾಕಿದ್ದರು.

ನನಗೆ ತಿಳಿಸದೇ ಸಭೆ ನಿಯೋಜನೆ

ಸಭೆ ಆಯೋಜನೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ, ನನಗೆ ತಿಳಿಯದಂತೆ ಸಭೆ ಅಜೆಂಡಾ ಮಾಡಲಾಗುತ್ತಿದೆ. ಈ ಬೆಳವಣಿಗೆ ಕುರಿತು ಅಧ್ಯಕ್ಷರೇ ಉತ್ತರಿಸಬೇಕು ಎಂದು ಪ.ಪಂ ಉಪಾಧ್ಯಕ್ಷ ಜಯಾನಂದ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರ ಬಳಿ ಜನರು ಸಮಸ್ಯೆ ಹೇಳಿಕೊಳ್ಳುತ್ತಿದ್ದು, ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ನಗರದಲ್ಲಿ ವಿನ್ಯಾಸ ಶುಲ್ಕ ಎಂದು 9550 ರೂ.ಪಡೆಯುತ್ತಿದ್ದು, ಈ ಅಧಿಕ ಮೊತ್ತವನ್ನು ಪಾವತಿಸಲು ಬಡವರಿಗೆ ಕಷ್ಟ ಸಾಧ್ಯವಾಗುತ್ತಿದೆ ಎಂದು ಜಗದೀಶ್ ಡಿ. ಹೇಳಿದರು. ಮುಡಾ ಅಧಿಕಾರಿ ಗುರುಪ್ರಸಾದ್ ಉತ್ತರಿಸಿ, ಇದು ಸರ್ಕಾರ ನಿಗದಿಪಡಿಸಿದ ದರ ಅದನ್ನು ಬದಲಾಯಿಸಲು ಅಧಿಕಾರವಿಲ್ಲ. ಸರ್ಕಾರದ ಮಟ್ಟದಲ್ಲಿ  ಆದೇಶವಾಗಬೇಕೆಂದರು.

ಇದಕ್ಕೆ ಪ್ರತ್ಯುತ್ತರ ನೀಡಿದ ವಿಪಕ್ಷದ ಜಗದೀಶ್ ಡಿ. ಮಾತನಾಡಿ ಆಡಳಿತ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ ಇರುವುದು ಎದ್ದು ಕಾಣುತ್ತಿದ್ದು, ಇದರ ಪರಿಣಾಮ ನಗರದ ಅಭಿವೃದ್ಧಿ ಮೇಲೆ ಬೀರುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಬಾಡಿಗೆ ನೆಲೆಯಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಕಟ್ಟಡದ ಸಂ ಮಾಲೀಕರು ತೆರಿಗೆ ಕಟ್ಟದಿದ್ದರೆ ಲೈಸನ್ಸ್ ನವೀಕರಣ ಮಾಡದೆ ತೊಂದರೆಯಾಗಿದೆ. ಈ ಬಗ್ಗೆ ವಿನಾಯಿತಿ ನೀಡಬೇಕು ಎಂದು ಜಗದೀಶ್ ಡಿ. ಒತ್ತಾಯಿಸಿದರು.

ಸ್ವಚ್ಛತೆ ಕಾಯ್ದುಕೊಳ್ಳುವಂತೆ ಎಚ್ಚರಿಕೆ

ಕಚೇರಿಯೊಳಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರೊಂದಿಗೆ, ಎಲ್ಲ ವಾರ್ಡ್‌ಗಳಿಗೆ ವಾರಕ್ಕೆ ಎರಡು ಬಾರಿಯಾದರು ಕಸದ ವಾಹನ ಹೋಗಬೇಕು. ಬೆಳ್ತಂಗಡಿ ಸಂತೆಕಟ್ಟೆ ಮತ್ತು ಮೂರುಮಾರ್ಗದ ಬಳಿ ಕಸದ ತೊಟ್ಟಿ ಇಡಬೇಕು. ಮೇಲಂತಬೆಟ್ಟು ಬಳಿ ಎರಡು ಕುಟುಂಬಗಳು ಜೋಪಡಿಯಲ್ಲಿ ವಾಸಿಸುತ್ತಿದ್ದು, ಅವರಿಗೆ ಅನುಕಂಪದ ಆಧಾರದಲ್ಲಿ 25,000 ರೂ. ಪರಿಹಾರ ನೀಡಬೇಕು. ನಗರ ವ್ಯಾಪ್ತಿಯಲ್ಲಿರುವ ವಕೀಲರ ಕಚೇರಿಗಳಿಗೆ ಪರವಾನಗಿ ನೀಡುವುದರೊಂದಿಗೆ ಕೆಆರ್ ಡಿಎಲ್ ನಿಂದ ಮಂಜೂರಾದ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಪೂರೈಸಬೇಕು ಎಂದು ಜಯಾನಂದ್ ಗೌಡ ಆಗ್ರಹಿಸಿದರು.

Related posts

ಧರ್ಮಸ್ಥಳದಲ್ಲಿ 2 ಕಿ.ಮೀ. ವ್ಯಾಪ್ತಿಯಲ್ಲಿ ಹೊಸದಾಗಿ ಖಾಸಗಿ ಹೋಟೆಲ್, ವಸತಿಗೃಹ ಆರಂಭಿಸದಂತೆ ಆಗ್ರಹ

Upayuktha

ರಾಜ್ಯದಲ್ಲಿ ಜೂನ್ 15ರಿಂದ ಮೀನುಗಾರಿಕೆ ನಿಷೇಧ: ಪರಿಷ್ಕೃತ ಆದೇಶ

Upayuktha

ಬೃಹತ್‌ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಜಾಗೃತಿ ಶಿಬಿರ ಇಂದು ಅಡ್ಯಾರ್‌ನಲ್ಲಿ

Upayuktha