ಅಪರಾಧ ಗ್ರಾಮಾಂತರ ಸ್ಥಳೀಯ

ಬೆಳ್ತಂಗಡಿ: ಮೂವರು ಸ್ಕೂಟರ್ ಕಳ್ಳರ ಬಂಧನ

ಬೆಳ್ತಂಗಡಿ: ಸ್ಕೂಟರ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಬೆಳ್ತಂಗಡಿ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಉಜಿರೆ ಗ್ಯಾರೇಜ್ ‌ಬಳಿ ಕಳ್ಳತನ ಮಾಡಿದ ಸ್ಕೂಟರ್ ಮತ್ತು ಬೇರೆ ಕಡೆ ಕಳ್ಳತನ ಮಾಡಿದ ಎರಡು ಸ್ಕೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಉಜಿರೆ ಗ್ರಾಮದ ವಂದನಾ ಭಂಡರ್ಕಾರ್ ಅವರು ಉಜಿರೆಯ ಶ್ರೀಹರಿ ಮೋಟಾರ್ಸ್ ಬಳಿ ರಿಪೇರಿ‌ ಮಾಡಲು ಇಟ್ಟು ತಾಯಿ ಮನೆ ಕಾರವಾರಕ್ಕೆ ಹೋಗಿ ವಾಪಸ್ ಬಂದು ನೋಡಿದಾಗ ಸ್ಕೂಟರ್ ನಾಪತ್ತೆಯಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು.

ಬಂಧಿತರು ಉಜಿರೆ ಗ್ರಾಮದ ಹಳೆಪೇಟೆಯ ನಿವಾಸಿ ಅರುಣ್ ಶೆಟ್ಟಿ (30), ಬೆಳ್ತಂಗಡಿ ಕನ್ಯಾಡಿ ಗ್ರಾಮದ ಗುರಿಪಳ್ಳದ ಹೇಮಂತ್ ಬಿರ್ವ ಅಲಿಯಾಸ್ ಹರ್ಷಿತ್ (20), ಉಜಿರೆ ಗ್ರಾಮದ ಸಂಪತ್ ಅಲಿಯಾಸ್ ಶ್ಯಾಮ್ (24) ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಉಜಿರೆ ಗ್ರಾಮದ ‌ಪಂಚರಿಕಾಡು ರಬ್ಬರ್ ತೋಟದಲ್ಲಿ ಮೂವರು ಯುವಕರು ಸ್ಕೂಟರ್ ವಾಹನವನ್ನು ಬಿಚ್ಚುತ್ತಿರುವ ಬಗ್ಗೆ ಬಂದು ಮಾಹಿತಿ ಮೇರೆಗೆ ದಾಳಿ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಉಜಿರೆಯಲ್ಲಿ ಗ್ಯಾರೇಜ್ ನಲ್ಲಿ ನಿಲ್ಲಿಸಿದ ಸ್ಕೂಟರ್ ಕಳ್ಳತನ ಮಾಡಿರುವುದು ಮತ್ತು ಬೇರೆ ಎರಡು ಸ್ಕೂಟರ್ ಕಳ್ಳತನ ಮಾಡಿ ಅದರ ವಸ್ತುಗಳನ್ನು ಬಿಚ್ಚಿ ಮಾರಾಟ ಮಾಡಲು ಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್‌ ಪಿ.ಜಿ‌ ನೇತೃತ್ವದ ಬೆಳ್ತಂಗಡಿ ಪಿಎಸ್ಐ‌ ನಂದ ಕುಮಾರ್ ತಂಡದ ಎಎಸ್ಐ ದೇವಪ್ಪ, ಎಎಸ್ಐ ತಿಲಕ್, ಪುಟ್ಟಸ್ವಾಮಪ್ಪ, ಇಬ್ರಾಹಿಂ, ಚರಣ್ ರಾಜ್, ಅಶೋಕ್, ವೆಂಕಟೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಫಿಲೋವಿಕಾಸ 2020 – ವಿಜ್ಞಾನ ಮಾದರಿ ಪ್ರದರ್ಶನ

Upayuktha

ಕೊರೊನಾ ವಿರುದ್ಧ ಸಮರ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದಿಂದ 24X7 ಸೇವೆ

Upayuktha

ನಾಳೆಯಿಂದ 3 ದಿನ ಮಲ್ಪೆ ಬೀಚ್ ಉತ್ಸವ

Upayuktha

Leave a Comment