ಗ್ರಾಮಾಂತರ ಪ್ರಮುಖ ಸಮುದಾಯ ಸುದ್ದಿ ಸಾಧಕರಿಗೆ ನಮನ ಸ್ಥಳೀಯ

ಬೆಳ್ತಂಗಡಿ: ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ

ಬೆಳ್ತಂಗಡಿ: ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ 2020ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗ್ರಾ.ಪಂ ಚುನಾವಣೆಯಲ್ಲಿ ಜಯ ಗಳಿಸಿದ ಹಾಗೂ ಸಮಾಜದ ಇತರ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸ್ವಜಾತಿ ಬಾಂಧವರಿಗೆ ಸನ್ಮಾನ ಮಾಡಲಾಯಿತು.

 ಮಾ.7ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ನಡೆದ ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ವಹಿಸಿದ್ದರು. ಬೆಂಗಳೂರಿನ ಬೇಗೂರು ಶ್ರೀ ನಾಗನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ನಾರಾಯಣ ಬೇಗೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 82ವಿದ್ಯಾರ್ಥಿಗಳಿಗೆ, ಕಲಾ, ಸಾಂಸ್ಕೃತಿಕ, ಕ್ರೀಡಾ ವಿಭಾಗದಲ್ಲಿ ವಿಶೇಷ ಸಾಧನೆಗೈದ 12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗ್ರಾ.ಪಂ.ಚುನಾವಣೆಯಲ್ಲಿ ವಿಜೇತರಾದ 10 ಅಧ್ಯಕ್ಷರು ಸೇರಿ 100ಮಂದಿ ಗ್ರಾ.ಪಂ. ಸದಸ್ಯರುಗಳನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.

ಇದರ ಜೊತೆಗೆ ಇಳಂತಿಲ ಗ್ರಾಮದ ನಿವೃತ್ತ ಯೋಧ ಪುರಂದರ ಗೌಡ, ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ದಾಸಪ್ಪ ಗೌಡ, ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ, ಕೊಡುಗೈದಾನಿ ಬೆಂಗಳೂರಿನ ಶ್ರೀ ನಾಗನಾಥೇಶ್ವರ ದೇವಸ್ಥಾನ ಧರ್ಮದರ್ಶಿಗಳಾದ ನಾರಾಯಣ ಬೇಗೂರು ಇವರನ್ನು ಸಂಘದ ವತಿಯಿಂದ ವಿಶೇಷವಾಗಿ ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ ಎಚ್. ಪದ್ಮ ಗೌಡ, ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ದಾಸಪ್ಪ ಗೌಡ ನಾಗಶ್ರೀ ಕೋಡ್ಯಡ್ಕ, ಸಂಘದ ಕಾರ್ಯದರ್ಶಿ ಗಣೇಶ್ ಗೌಡ, ಉಪಾಧ್ಯಕ್ಷರಾದ ಕೃಷ್ಣಪ್ಪ ಗೌಡ, ನಾರಾಯಣ ಗೌಡ ಕೋಶಾಧಿಕಾರಿ ರಾಜೀವ್ ಧರ್ಮಸ್ಥಳ, ಜೊತೆ ಕಾರ್ಯದರ್ಶಿ ಶ್ರೀನಾಥ್, ನಿರ್ದೇಶಕರುಗಳಾದ ವಿಜಯ ಕುಮಾರ್ ನ್ಯಾಯತರ್ಪು, ಹರೀಶ್ ಬಂದಾರು, ಉಷಾದೇವಿ ಕಿನ್ಯಾಜೆ, ಅಭಿನಂದನಾ ಸಮಿತಿ ಅಧ್ಯಕ್ಷ ಯುವರಾಜ್ ಅನಾರು, ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ ನಾರಾಯಣ ಗೌಡ, ಯುವ ವೇದಿಕೆಯ ಅಧ್ಯಕ್ಷ ಯಶವಂತ್ ಬಿ.ಟಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪಂದನಾ ಸೇವಾ ಸಂಘದ ಬೆಳವಣಿಗೆಯಲ್ಲಿ ಮಾರ್ಗದರ್ಶನ ನೀಡುತ್ತಿರುವ ಸಂಘದ ನಿಕಟ ಪೂರ್ವ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು ಇವರನ್ನು ಸ್ಪಂದನಾ ಸೇವಾ ಸಂಘದ ಪರವಾಗಿ ಅಭಿನಂದಿಸಲಾಯಿತು. ಅಭಿನಂದನಾ ಸಮಿತಿ ಅಧ್ಯಕ್ಷ ಯುವರಾಜ್ ಸ್ವಾಗತಿಸಿ, ಮೀನಾಕ್ಷಿ ಮತ್ತು ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ಗಣೇಶ್ ಗೌಡ ವಂದಿಸಿದರು.

 

Related posts

ಮರು ಬಳಕೆಯ ಕಾಗದದಿಂದ ತಯಾರಿಸಿದ ಆಕರ್ಷಕ ಆಲಂಕಾರಿಕ ಕ್ರಿಸ್‌ಮಸ್ ಡೆಕೋರೇಟಿವ್ಸ್

Upayuktha

`ಕುಲಾಲ್ ವರ್ಲ್ಡ್’ ಬಳಗದಿಂದ ಎರಡು ಕುಟುಂಬಕ್ಕೆ 69 ಸಾವಿರ ರೂ. ಆರ್ಥಿಕ ನೆರವು

Upayuktha

ವಿಶೇಷ ಪ್ಯಾಕೇಜ್‌ನಲ್ಲಿ ಎಂಎಸ್‌ಎಂಇಗಳಿಗೆ 3 ಲಕ್ಷ ಕೋಟಿ ರೂ ಸಾಲ: ಸರಕಾರದ ಗ್ಯಾರಂಟಿ ನಿರೀಕ್ಷೆ

Upayuktha