ಅಪಘಾತ- ದುರಂತ ಗ್ರಾಮಾಂತರ ಪ್ರಮುಖ ರಾಜ್ಯ ಸ್ಥಳೀಯ

ಚಾರ್ಮಾಡಿ ಘಾಟ್ ನಲ್ಲಿ ಅಪಘಾತ: ಧರ್ಮಸ್ಥಳ ಶಿವರಾತ್ರಿಗೆ ಆಗಮಿಸುತ್ತಿದ್ದ ಪಾದಯಾತ್ರಿಗಳಿಗೆ ಡಿಕ್ಕಿ

ಬೆಳ್ತಂಗಡಿ:  ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನವೊಂದು ಧರ್ಮಸ್ಥಳ ಕ್ಷೇತ್ರಕ್ಕೆ ಶಿವರಾತ್ರಿಗೆಂದು ಬರುತ್ತಿದ್ದ  ಪಾದಚಾರಿಗಳಿಗೆ ಢಿಕ್ಕಿ ಹೊಡೆದ ಘಟನೆ ಭಾನುವಾರ ಸಂಜೆ ನಡೆದಿದೆ.

ಪರಿಣಾಮ ಇಬ್ಬರ ಸ್ಥಿತಿ  ಗಂಭೀರವಾಗಿದ್ದು, ಉಳಿದ 10 ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಈ ಅವಘಡ ಸಂಭವಿಸಿದ್ದು, ಗಾಯಾಳುಗಳನ್ನು ಚಾರ್ಮಾಡಿಯ ಸಮಾಜಸೇವಕ  ಹಸನಬ್ಬ ಮತ್ತು ತಂಡದವರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಲ್ಲಿ ನೆರವಾಗಿದ್ದಾರೆ.

ಪಾದೆ ಯಾತ್ರೆ ಹೊರಟ್ಟಿದ ಭಕ್ತರನ್ನು ಹಾಸನದ ಅರ್ಜುನ್ ಕುಮಾರ್(29),ಧನರಾಜ್(16) ಎಂದು ಗುರುತಿಸಲಾಗಿದ್ದು, ಟಿಟಿಯಲ್ಲಿದ್ದವರನ್ನು ಕಟೀಲು ಪರಿಸರದ ಚೆಂಡೆ ಕಲಾವಿದರ ತಂಡದ ಸದಸ್ಯರಾದ ದಿಲೀಪ್(19), ವಿಶ್ವನಾಥ(18), ಲಾವಣ್ಯ(18), ಐಶ್ವರ್ಯಾ(21), ಶ್ರೇಯಾ(18), ಯಕ್ಷಿತ್(21), ಯತೀಶ್ (21),ಅನನ್ಯಾ(19) ಹಾಗೂ ಚಾಲಕ ರಾಜೇಶ್(32) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಕಕ್ಕಿಂಜೆ ಹಾಗೂ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸುವಲ್ಲಿ ಚಾರ್ಮಾಡಿಯ ಸಮಾಜಸೇವಕ ಆಪದ್ಬಾಂಧವ ಹಸನಬ್ಬ ಮತ್ತು ತಂಡ ನೆರವಾಗಿದ್ದು, ಚಿಕ್ಕಮಗಳೂರಿನಿಂದ ಕಾರ್ಯಕ್ರಮ ಮುಗಿಸಿ ಹಿಂದಿರುವಾಗ ಅಪಘಾತ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮುಖ್ಯಮಂತ್ರಿ ಬಿಎಸ್‌ವೈ ಅವರಿಗೆ ಕೊರೊನಾ ಪಾಸಿಟಿವ್

Upayuktha

ವಿವೇಕಾನಂದ ಕಾಲೇಜಿನಲ್ಲಿ ರಾಜ್ಯ ಮಟ್ಟದ ಐಟಿ-ಫೆಸ್ಟ್ ‘ಟೆಕ್ನೋತರಂಗ್ 2020’ಗೆ ಚಾಲನೆ

Upayuktha

ಸೋಲಿನ ಪಾಠವೇ ಯಶಸ್ಸಿಗೆ ಮೆಟ್ಟಿಲು: ಶ್ರೀನಿವಾಸ ಪೈ

Upayuktha