ದೇಶ-ವಿದೇಶ ಪ್ರಮುಖ

ಪ. ಬಂಗಾಳ ಫಲಿತಾಂಶ: ಮೂರನೇ ಬಾರಿ ಟಿಎಂಸಿಗೆ ಅಧಿಕಾರ; ನಂದಿಗ್ರಾಮದಲ್ಲಿ ಮಮತಾ ಸೋಲು

 

ಕೋಲ್ಕತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ಎದುರು ಸೋಲು ಅನುಭವಿಸಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಈ ಕ್ಷೇತ್ರದಲ್ಲಿ ಮತಗಳ ಎಣಿಕೆ ಆರಂಭದಿಂದಲೂ ಫಲಿತಾಂಶದ ಟ್ರೆಂಡ್‌ ಏರಿಳಿತ ಕಾಣುತ್ತಲೇ ಸಾಗಿತ್ತು. ಮೊದಲಿನಿಂದಲೂ ಗೆಲುವಿನ ಕಡೆಗೆ ನಾಗಾಲೋಟದಿಂದ ಸಾಗಿದ್ದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಒಂದು ಹಂತದಲ್ಲಿ ಹಿನ್ನಡೆ ಅನುಭವಿಸಿ ಮಮತಾ ಬ್ಯಾನರ್ಜಿ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಗೆಲುವು ಬಿಜೆಪಿ ಪಾಲಾಯಿತು.

 

ರಾಜ್ಯದಲ್ಲಿ ಒಟ್ಟಾರೆ ಫಲಿತಾಂಶ ತೃಣಮೂಲ ಕಾಂಗ್ರೆಸ್‌ ಪರವಾಗಿದ್ದು, ಮೊದಲಿಗಿಂತಲೂ ಹೆಚ್ಚು (214) ಸ್ಥಾನಗಳೊಂದಿಗೆ ಭರ್ಜರಿ ಬಹುಮತ ಪಡೆದು ಮೂರನೇ ಅವಧಿಗೆ ಅಧಿಕಾರಕ್ಕೆ ಗಳಿಸಿದೆ. ಆದರೆ ಪಕ್ಷದ ನಾಯಕಿ ಮಮತಾ ಸೋಲು ಅನುಭವಿಸಿದ್ದಾರೆ.

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅಧಿಕಾರಕ್ಕೆ ಮರಳುತ್ತಲೇ ರಾಜಕೀಯ ಹಿಂಸಾಚಾರ ಭುಗಿಲೆದ್ದಿದೆ. ಬಿಜೆಪಿ ಕಚೇರಿಗಳ ಮೇಲೆ ತೃಣಮೂಲ ಪಕ್ಷದ ಬೆಂಬಲಿಗರು ಬೆಂಕಿಹಚ್ಚಿ ಸುಟ್ಟು ಹಾಕುತ್ತಿದ್ದಾರೆ. ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.

ನಂದಿಗ್ರಾಮದ ಫಲಿತಾಂಶವನ್ನು ಒಪ್ಪಿಕೊಳ್ಳುವುದಾಗಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ. ಅದೇ ವೇಳೆಗೆ ಚುನಾವಣೆ ಆಯೋಗದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವುದಾಗಿಯೂ ಘೋಷಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

2ನೇ ಅಂತಾರಾಷ್ಟ್ರೀಯ ಟಿ20: ದ. ಆಫ್ರಿಕಾ ವಿರುದ್ಧ ಭಾರತ ಭರ್ಜರಿ ಜಯ

Upayuktha

ಭಾರೀ ಗಾಳಿ ಮಳೆ: ಕಾಸರಗೋಡು ಉಪಜಿಲ್ಲಾ ಕಲೋತ್ಸವದ ಪೆಂಡಾಲ್‌ ಕುಸಿತ, ಅದೃಷ್ಟವಶಾತ್‌ ತಪ್ಪಿದ ದುರಂತ

Upayuktha

ಕೇಬಲ್ ಟಿವಿ ಅಧಿಕ ದರ ವಸೂಲಿ ಮಾಡಿದರೆ ಕ್ರಮ: ಡಿಸಿ ಎಚ್ಚರಿಕೆ

Upayuktha