ಪ್ರಮುಖ ರಾಜ್ಯ

ಕಲಾಪದ ವೇಳೆ ಶರ್ಟ್ ತೆಗೆದು ಅಶಿಸ್ತು ಪ್ರದರ್ಶನ: ಶಾಸಕ ಬಿಕೆ ಸಂಗಮೇಶ್ ಅಮಾನತು

ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಅಶಿಸ್ತಿನಿಂದ ನಡೆದುಕೊಂಡ ಭದ್ರಾವತಿ ಶಾಸಕ ಬಿಕೆ ಸಂಗಮೇಶ್​ ಅವರನ್ನು 9 ದಿನಗಳ ಕಾಲ ಅಮಾನತು ಮಾಡಿ ನಿರ್ಣಯ ಕೈಗೊಳ್ಳಲಾಗಿದೆ.

ಒನ್ ನೇಷನ್, ಒನ್ ಎಲೆಕ್ಷನ್​ ವಿಚಾರಕ್ಕೆ ಕಾಂಗ್ರೆಸ್​ ಶಾಸಕರು ವಿಧಾನಸಭೆ ಕಲಾಪದ ವೇಳೆ ಗಲಾಟೆ, ಗದ್ದಲ ಉಂಟು ಮಾಡಿದರು. ಕಾಂಗ್ರೆಸ್​ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸುತ್ತಿದ್ದಾಗ ಶಾಸಕ ಸಂಗಮೇಶ್​​, ಶರ್ಟ್​ ಬಿಚ್ಚಿ ಪ್ರತಿಭಟನೆಗೆ ಮುಂದಾದ್ರು. ಇದಕ್ಕೆ ಸ್ಪೀಕರ್ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಾಲಪವನ್ನ ಮುಂದೂಡಿದ್ದರು.

ಕಲಾಪ ಪುನಃ ಆರಂಭವಾಗುತ್ತಿದ್ದಂತೆ ‘ಸದನದಲ್ಲಿ ಅಗೌರವ, ಅಶಿಸ್ತಿನಿಂದ ನಡೆದರೆ ನಾನು ಸಹಿಸಲ್ಲ ಅಂತಾ ಸಂಗಮೇಶ್ ಹೆಸರಿಸಿ ಸ್ಪೀಕರ್ ಕಾಗೇರಿ ಉಳಿದ ಸದಸ್ಯರಿಗೆ ಎಚ್ಚರಿಕೆಯನ್ನ ನೀಡಿದರು. ನಂತರ ಸಂಗಮೇಶ್ ಕಲಾಪಕ್ಕೆ ಬಾರದಂತೆ ತಡೆಯುವ ಪ್ರಸ್ತಾವವನ್ನ ಸಚಿವ ಬೊಮ್ಮಾಯಿ ಮಂಡಿಸಿದರು.

ನಂತರ ತಕ್ಷಣದಿಂದ ಮಾರ್ಚ್​ 12ನೇ ತಾರೀಖಿನವರೆಗೆ ಸಂಗಮೇಶ್ ಸದನದಿಂದ ಹೊರಕ್ಕೆ ಹಾಕುವ ನಿರ್ಣಯವನ್ನ ಕೈಗೊಳ್ಳಲಾಯಿತು. 9 ದಿನಗಳ ಕಾಲ ಸಂಗಮೇಶ್​​ರನ್ನ ಸದನದಿಂದ ಅಮಾನತು ಮಾಡುವ ನಿರ್ಧಾರವನ್ನ ಸ್ಪೀಕರ್ ಕಾಗೇರಿ ಕೈಗೊಂಡರು.

Related posts

ಬಾನಲ್ಲಿ ನೋಡಿ, ಗುರು- ಶನಿ ಗ್ರಹಗಳ ಅಪರೂಪದ ಜೋಡಿ

Upayuktha

ಕನ್ನಡ ಖ್ಯಾತ ಹಾಸ್ಯನಟ ಬುಲೆಟ್‌ ಪ್ರಕಾಶ್‌ ನಿಧನ

Upayuktha

ಉತ್ತರ ಭಾರತದ ಹೆಸರಾಂತ ಶಿಕ್ಷಣ ಸಂಸ್ಥೆ ಎಲೆನ್ ಇದೀಗ ಮಂಗಳೂರಿನಲ್ಲಿ

Upayuktha