ನಗರ ಸ್ಥಳೀಯ

ಯುವವಾಹಿನಿ ವತಿಯಿಂದ ಕುದ್ರೋಳಿಯಲ್ಲಿ ಭಜನಾ ಸ್ಪರ್ಧೆ ನಾಳೆ

ಸಾಂದರ್ಭಿಕ ಚಿತ್ರ

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಯುವವಾಹಿನಿ’ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಕುಣಿತ ಭಜನಾ ಸ್ಪರ್ಧೆ ಜ.19ರ ಭಾನುವಾರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಲಿದೆ.

‘ಕುಣಿದು ಭಜಿಸಿರೋ’ ಭಾವ-ಗಾನ-ಕುಣಿತ ಸ್ಪರ್ಧೆಯನ್ನು ಬೆಳಗ್ಗೆ 9:30ಕ್ಕೆ ದೀಪ ಪ್ರಜ್ವಲನೆ ಮೂಲಕ ಊರ್ಮಿಳಾ ರಮೇಶ್ ಕುಮಾರ್‌ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಗೋಕರ್ಣನಾಥ ಕ್ಷೇತ್ರದ ನಿರ್ದೇಶಕ ಅನಿಲ್ ಕುಮಾರ್‌, ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಾಸ ಚುಟುಕು ಸಾಹಿತಿ, ಚಲನಚಿತ್ರ ನಟ ಕಾರ್ಕಳ ಶೇಖರ್ ಭಂಡಾರಿ ಭಾಗವಹಿಸಲಿದ್ದಾರೆ.

ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಉಮಾ ಶ್ರೀಕಾಂತ್, ಯುವ ವಾಹಿನಿ ಕೇಂದ್ರ ಸಮಿತಿಯ ನಾರಾಯಣಗುರು ತತ್ವಪ್ರಚಾರದ ನಿರ್ದೇಶಕ ಜಗದೀಶ್ ಸುವರ್ಣ ಹಾಗೂ ಕಾರ್ಯಕ್ರಮ ಸಂಚಾಲಕರಾದ ಚಿತ್ರಶ್ರೀ ಮನೋಜ್‌ ಉಪಸ್ಥಿತರಿರುತ್ತಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬಡವರನ್ನು ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ: ಡಿ. ವೇದವ್ಯಾಸ ಕಾಮತ್

Upayuktha

ಕೋವಿಡ್-19: ಕರ್ನಾಟಕದ ಗಡಿ ಮುಚ್ಚಿದರೆಂದು ಹುಯಿಲೆಬ್ಬಿಸುತ್ತಿರುವ ಕೇರಳ

Upayuktha

ಮುಳ್ಳೇರ್ಯ ಹವ್ಯಕ ಮಂಡಲ ಶಾಸನತಂತ್ರ ಸಭೆ

Upayuktha