ಕಲೆ ಸಂಸ್ಕೃತಿ ಗ್ರಾಮಾಂತರ ಸ್ಥಳೀಯ

ತುಡರ್ ಯುವಕ ಮಂಡಲದಿಂದ ಭಜನಾ ಸಂಕೀರ್ತನೆ – ಅಯೋಧ್ಯೆಯ ಭೂಮಿ ಪೂಜೆ ಸ್ಪೆಷಲ್

ಪುತ್ತೂರು ,ಕಾವು : ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿದ ಹಿನ್ನೆಲೆಯಲ್ಲಿ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ತುಡರ್ ಭಜನಾ ಸಂಘದ ವತಿಯಿಂದ ಆ.5ರಂದು ಸಂಜೆ ನನ್ಯ ಜನಮಂಗಲ ಸಭಾಭವನದಲ್ಲಿ ಭಜನಾ ಸಂಕೀರ್ತನೆ ನಡೆಯಿತು.

 

ಭಜನಾ ಸಂಕೀರ್ತನೆಯಲ್ಲಿ ತುಡರ್ ಭಜನಾ ಸಂಘ, ಸುಜ್ಞಾನ ಮಕ್ಕಳ ಭಜನಾ ಸಂಘ, ಕಾಟುಕುಕ್ಕೆ ಶಿಷ್ಯ ವೃಂದ ನನ್ಯ ಇದರ ಭಜನಾರ್ಥಿಗಳು ಪಾಲ್ಗೊಂಡಿದ್ದರು.

ಹಿರಿಯರಾದ ಚಂದ್ರಶೇಖರ ರಾವ್ ನಿಧಿಮುಂಡ ರವರು ದೀಪ ಪ್ರಜ್ವಲಿಸಿದರು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವಪ್ರಸಾದ್ ಕೊಚ್ಚಿ, ನನ್ಯ ಕಾಟುಕುಕ್ಕೆ ಶಿಷ್ಯವೃಂದದ ಸದಸ್ಯರಾದ ರಮೇಶ್ ಎನ್ ರಾವ್, ನಿಧಿಮುಂಡ, ರಮೇಶ್ಚಂದ್ರ ಮುಂಡಕೊಚ್ಚಿ, ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಅಧ್ಯಕ್ಷ ಸುನೀಲ್ ನಿಧಿಮುಂಡ, ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಕಾರ್ಯದರ್ಶಿ ಧನಂಜಯ ನಾಯ್ಕ ಕುಂಞಿಕುಮೇರು, ಸುಜ್ಞಾನ ಮಕ್ಕಳ ಭಜನಾ ಸಂಘದ ಸಂಚಾಲಕ ಗಂಗಾಧರ ನಾಯ್ಕ, ಯುವಕ ಮಂಡಲದ ಮಾಜಿ ಅಧ್ಯಕ್ಷ ಭಾಸ್ಕರ ಬಲ್ಯಾಯ, ಪದಾಧಿಕಾರಿ ಜಗದೀಶ ನಾಯ್ಕ ಆಚಾರಿಮೂಲೆ, ಸದಸ್ಯರಾದ ಯಜಿತ್ ಆಚಾರಿಮೂಲೆ, ರಾಘವ ಬಿ, ದಿವ್ಯಪ್ರಸಾದ್ ಎ.ಎಂ, ನಿರಂಜನ ರಾವ್, ಲಿಂಗಪ್ಪ ನಾಯ್ಕ ನನ್ಯ, ರಾಘವ ಪಿ.ಎಸ್, ಸಂದೇಶ್ ಚಾಕೋಟೆ ಮತ್ತಿತರರು ಭಾಗವಹಿಸಿದ್ದರು.

ಭಜನಾ ಸಂಕೀರ್ತನೆಯ ಬಳಿಕ ರಕ್ಷಾ ಬಂಧನ ಆಚರಿಸಿ ಸಿಹಿ ಹಂಚಲಾಯಿತು.

Related posts

ರಾಮಾಯಣ ಪರೀಕ್ಷೆ: ಶಿವಾನಿ ಭಟ್ ಕುಂಬಳೆ ಪ್ರಥಮ

Upayuktha

ಆನ್‌ಲೈನ್ ಮೂಲಕ ಮಾತ್ರ ಪಾಸ್‌ಗಳ ವಿತರಣೆ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್

Upayuktha

ಆರ್ಥಿಕ ಗಣತಿ ಕುರಿತು ಜನರಿಗೆ ಸಂಕ್ಷಿಪ್ತ ಮಾಹಿತಿ ನೀಡಿ: ದ.ಕ ಜಿಲ್ಲಾಧಿಕಾರಿ

Upayuktha

Leave a Comment

error: Copying Content is Prohibited !!