ಧರ್ಮಸ್ಥಳ: ಶ್ರೀ ಶಂಕರ ವಾಹಿನಿಯ ವತಿಯಿಂದ ಭಜನಾ ಸಾಮ್ರಾಟ್ ಕಾರ್ಯಕ್ರಮವು ಅನೇಕ ಸರಣಿಗಳ ಯಶಸ್ಸನ್ನು ಕಂಡಿದ್ದು, ಬಹುಜನರ ಅಪೇಕ್ಷೆಯಂತೆ ಈ ವರ್ಷವೂ ಪುನರಾರಂಭಿಸಲಾಗುತ್ತಿದೆ. ಆ ಪ್ರಯುಕ್ತ ಡಿ.12ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ “ಭಜನಾ ಸಾಮ್ರಾಟ್-2020” ಆಡಿಷನ್ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಭಜನಾ ತಂಡಗಳ ಆಡಿಷನ್ನ್ನು ಇದೇ ದಿನ ನಡೆಸಲಾಗುತ್ತದೆ. 18ರಿಂದ 40 ವರ್ಷ ವಯೋಮಿತಿಯ, ಕನಿಷ್ಟ ಒಂದು ತಂಡದಲ್ಲಿ, ವಾದ್ಯಗೋಷ್ಠಿಯವರೂ ಸೇರಿ, ಒಟ್ಟು 7 ರಿಂದ 9 ಪುರುಷ ಹಾಗೂ ಮಹಿಳಾ ಸದಸ್ಯರು ಭಾಗವಹಿಸಬಹುದು. ಯಾವುದೇ ಭಾಷೆ, ಶೈಲಿಯಲ್ಲಿ ಹಾಡಬಹುದಾಗಿದೆ.
ಒಂದು ಭಜನಾ ತಂಡಕ್ಕೆ 10 ನಿಮಿಷಗಳ ಕಾಲಾವಕಾಶವಿರುತ್ತದೆ ಎಂದು ಶ್ರೀ ಶಂಕರ ವಾಹಿನಿಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಆಸಕ್ತ ಭಜನಾ ಮಂಡಳಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಶಂಕರ ವಾಹಿನಿಯ ನಿತ್ಯ (ದೂರವಾಣಿ ಸಂಖ್ಯೆ-9632200803) ಇವರನ್ನು ಸಂಪರ್ಕಿಸಬಹುದಾಗಿದೆ.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ