ಗ್ರಾಮಾಂತರ ಸ್ಥಳೀಯ

ಮಂಜೇಶ್ವರ ವ್ಯಾಪ್ತಿಯ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಭಾರತಿ ಸತೀಶ್ ಆಯ್ಕೆ

ಎಲ್‌ಡಿಎಫ್‌ ಅಭ್ಯರ್ಥಿಯಾಗಿ ಮೂರನೇ ಬಾರಿ ಗೆಲುವು

ಉಡುಪಿ: ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಂಜೇಶ್ವರದ ವರ್ಕಾಡಿ ಪಂಚಾಯತ್ ನ ತಲಕ್ಕಿ ವಾರ್ಡ್ ನಲ್ಲಿ ಮೂರನೇ ಬಾರಿಗೆ ಎಲ್‌ಡಿಎಫ್ ಅಭ್ಯರ್ಥಿಯಾಗಿ ಅತ್ಯಧಿಕ ಮತಗಳಿಂದ ಗೆದ್ದ ಭಾರತಿ ಸತೀಶ್ ಇದೀಗ ಆ ಪಂಚಾಯತ್ ನ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಗಮನಸೆಳೆದಿದ್ದಾರೆ.

ಮೂಲತಃ ಬಂಟ್ವಾಳದವರಾಗಿರುವ ಭಾರತಿ ಕಡುಬಡತನದಲ್ಲಿ ಬೆಳೆದು ಉತ್ತಮ ಶಿಕ್ಷಣ ಪಡೆದವರು. ಬಡವರ ಏಳಿಗೆಯ ಬಗ್ಗೆ ಶ್ರಮಿಸಬೇಕೆಂಬ ಆಸಕ್ತಿಯಿಂದ ಸಾಮಾಜಿಕ ಕಾರ್ಯಗಳಲ್ಲಿ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.

ವಿವಾಹದ ಬಳಿಕ ಮಂಜೇಶ್ವರದಲ್ಲೂ ಸಮಾಜಮುಖಿ ಕಾರ್ಯಗಳಲ್ಲಿ ಮುಂದುವರೆದ ಅವರು ಕಮ್ಯೂನಿಸ್ಟ್ ಪಕ್ಷದ ಸದಸ್ಯತ್ವ ಸ್ವೀಕರಿಸಿ ಪಕ್ಷದಲ್ಲೂ ವಿವಿಧ ಜವಾಬ್ದಾರಿಗಳನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿ ಕಳೆದ ಎರಡು ಅವಧಿಗೆ ವರ್ಕಾಡಿ ಪಂಚಾಯತ್ ಚುನಾವಣೆಗಳಲ್ಲಿ ಗೆದ್ದು ಪ್ರಾಮಾಣಿಕ ಕಾರ್ಯಗಳಿಂದ ಜನರ ಅಭಿಮಾನಕ್ಕೆ ಪಾತ್ರರಾಗಿದ್ದರು.

ಈಗ ಮೂರನೇ ಬಾರಿಗೂ ಆಡಳಿತಾರೂಢ ಎಲ್‌ಡಿಎಫ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಧಿಕ ಮತಗಳಿಂದ ಗೆದ್ದ ಅವರು ಇದೀಗ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಭಾರತಿಯವರ ಪತಿ ಸತೀಶ್ ಉಡುಪಿಯಲ್ಲಿ ವ್ಯವಹಾರ ನಡೆಸುತ್ತಿದ್ದು ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ಅತ್ಯಂತ ನಿಸ್ಪೃಹ ಹಾಗೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನ.22ರಿಂದ 28ರವರೆಗೆ ಸಾಜದಲ್ಲಿ ಎನ್‍ಎಸ್‍ಎಸ್ ಶಿಬಿರ

Upayuktha

ಕರ್ತವ್ಯವೇ ಸೇವೆಯಾದಾಗ ಸಮಾಜ ಗುರುತಿಸುತ್ತದೆ: ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್

Upayuktha

ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ

Upayuktha News Network