ಕತೆ-ಕವನಗಳು

ಭೂ ತಾಯಿ

ಭೂ ತಾಯಿಯೆ ನೀ ಅಂಜದಿರು
ಕಾವಲುಗಾರ ನಾ ಇರುವಾಗ..

ಸಿಡಿಲಿರಲಿ ಮಳೆಯಿರಲಿ
ಏನೇ ಇರಲಿ ನಾ ಜಯಿಸುವೆನು….

ವೈರಿಯ ಗುರಿಗೆ ಎದೆಯೊಡ್ಡಿ
ನೆತ್ತರ ಹೊಳೆಯನ್ನೇ ಹರಿಸುವೆ ನಾ ….

ಕಟುಕರ ಎದೆಯ ಅಂಗಳದಿ
ನಿನ್ನ ಮುಟ್ಟಲು ಭಯವ ಹುಟ್ಟಿಸುವೆ…..

ಮಾತೆಯೆ ನಿನ್ನ ತಿರಂಗವನ್ನು
ಬಾನೆತ್ತರದಿ ನಾ ಹಾರಿಸುವೆ……

ನಾ ಹುಟ್ಟಿದ ನೆಲ ಇದು ನನ್ನ ನೆಲ
ಕಾಯುವೆ ನಾ ಪ್ರತಿ ಹಗಳಿರುಲ….

ಯತೀ ಕುಲಾಲ್

Related posts

ಚಿತ್ರಕ್ಕೊಂದು ಆಶು ಕವನ: ಕಾಕ ಭೋಜನ

Upayuktha

ಆಶು ಕವನ: ಯೋಗ-ಭೋಗ

Upayuktha

ಕವನ: ಬಾಳ ಸತ್ಯ

Upayuktha