ಕ್ಷೇತ್ರಗಳ ವಿಶೇಷ ನಗರ ಸ್ಥಳೀಯ

ಶ್ರೀ ಸೋದೆ ವಾದಿರಾಜ ಮಠದಲ್ಲಿ ಭೂವರಾಹ ಜಯಂತೀ

ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಸೋದೆ ವಾದಿರಾಜ ಮಠ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಶ್ರೀ ಕ್ಷೇತ್ರ ಸೋಂದಾ ಶಿರಸಿಯಲ್ಲಿ ಇಂದು ಭೂವರಾಹ ಜಯಂತಿ ಆಚರಿಸಿದರು.

ಶ್ಯಾಮಃ ಸುದರ್ಶನ ವರಾಭಯಸದ್ವರೇತೋ
ಭೂಮ್ಯಾಯುತೋಖಿಲ ನಿಜೋಕ್ತ ಪರಿಗ್ರಹೈಶ್ಚ
ದೈವ್ಯೋ ನಿಜೈಶ್ಚ ತನುಭಿಃ ಸಕಲೈರುಪೇತಃ
ಕೋಲೋ ಹರಿಃ ಸಕಲವಾಂಛಿತ ಸಿದ್ಧತೇಜಃ|| (ಭೂವರಾಹ ಸ್ತುತಿ)

ಇಂದು ಭೂವರಾಹ ಜಯಂತೀ ಪರ್ವದಿನ (ಭಾದ್ರಪದ ಶುದ್ಧ ಪಂಚಮೀ ಭಾನುವಾರ). ದುಷ್ಟ ಹಿರಣ್ಯಾಕ್ಷನನ್ನು ಸಂಹರಿಸಿ ಭೂದೇವಿಯ ಉದ್ಧಾರಕ್ಕಾಗಿ ಭಗವಂತ ವರಾಹರೂಪದಲ್ಲಿ ಅವತಾರ ಎತ್ತಿ ಬಂದ ಪವಿತ್ರ ದಿನ. ಉಡುಪಿ ಅಷ್ಟ ಮಠಗಳಲ್ಲೊಂದಾಗಿರುವ ಶ್ರೀ ಸೋದೆ ವಾದಿರಾಜ ಮಠದ ಪಟ್ಟದ ದೇವರು ಭೂವರಾಹ ದೇವರು.

ಜಗದ್ಗುರು ಶ್ರೀ ಮಧ್ವಾಚಾರ್ಯ ಕರಾರ್ಚಿತ, ಭಾವೀ ಸಮೀರ ಶ್ರೀ ವಾದಿರಾಜಗುರು ಸಾರ್ವಭೌಮರೇ ಮೊದಲಾದ ಮಹಾ ತಪಸ್ವಿಗಳಿಂದ ಸುಪೂಜಿತ ಶ್ರೀ ಭೂವರಾಹ ದೇವರಿಗೆ ಭಾನುವಾರ ಸೋದೆ ಮಠದ ಪ್ರಸ್ತುತ ಉತ್ತರಾಧಿಕಾರಿಗಳಾಗಿರುವ ಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು (ಚಾತುರ್ಮಾಸ್ಯ ವ್ರತ ನಿಮಿತ್ತ ಶ್ರೀ ಕ್ಷೇತ್ರ ಸೋಂದಾ ಶಿರಸಿಯಲ್ಲಿ) ಭೂವರಾಹ ದೇವರಿಗೆ ವಿಶೇಷ ಅಭಿಷೇಕ ಅಲಂಕಾರ ಅರ್ಚನೆ ಅರ್ಪಣೆ ಆರತಿಯೇ ಮೊದಲಾದವುಗಳನ್ನು ನೆರವೇರಿಸಿ ವಿಶೇಷ ಪೂಜೆ ನೆರವೇರಿಸಿ ಜಗತ್ತಿನಲ್ಲಿ ವ್ಯಾಪಿಸಿರುವ ಕೊರೊನಾ ವ್ಯಾಧಿಯಿಂದ ಮುಕ್ತಿ ಹಾಗೂ ಸಮಸ್ತ ಜಗತ್ತಿನ ಕಲ್ಯಾಣಕ್ಕಾಗಿ ಶ್ರೀ ಭೂವರಾಹದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

-ವಾಸುದೇವ ಭಟ್, ಪೆರಂಪಳ್ಳಿ

(ಉಪಯುಕ್ತ ನ್ಯೂಸ್)

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಫೆ.1ರಿಂದ ವಳಲಂಬೆ ಜಾತ್ರೋತ್ಸವ: ಗೊನೆ ಮುಹೂರ್ತ

Upayuktha

ರೇಡಿಯೋ ಪಾಂಚಜನ್ಯದಿಂದ ‘ಬಾನುಲಿ ಕಾರ್ಯಕ್ರಮಗಳು’ ಮಾಹಿತಿ ಕಾರ್ಯಾಗಾರ

Upayuktha

ಆಳ್ವಾಸ್‍ನಲ್ಲಿ ‘ಓಶಿಯಾನಸ್ ಫೆಸ್ಟ್’: ಮಿಂಚಿದ ‘ಬಿಗ್‌ಬಾಸ್‌- 7’ ಶೈನ್ ಶೆಟ್ಟಿ

Upayuktha