ಬೆಂಗಳೂರು: ಮಜಾಭಾರತ ಖ್ಯಾತಿಯ ಅಪ್ಪಟ ಪ್ರತಿಭೆ ಪಾವಗಡ ಮಂಜು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬಹುದು ಎಂದು ಹಿರಿಯ ಕಲಾವಿದ ಶಂಕರ್ ಅಶ್ವಥ್ ಭವಿಷ್ಯ ನುಡಿದಿದ್ದಾರೆ.
ದಿನ ಕಳೆದಂತೆ ದೊಡ್ಮನೆಯಲ್ಲಿ ಆಟದ ಮಜಾ ಬರುತ್ತಿದ್ದು, ಅಸಲಿ ಮುಖಗಳ ಅನಾವರಣಗೊಳ್ಳುತ್ತಿದೆ. ಅಲ್ಲದೇ ಸ್ಟಾರ್ ನಟ-ನಟಿಯರ ಮಧ್ಯೆ ವಿಭಿನ್ನ ಕ್ಷೇತ್ರದ ಪ್ರತಿಭೆಗಳು ಈ ಬಾರಿ ಬಿಗ್ ಬಾಸ್ ಗೆ ಎಂಟ್ರಿ ಪಡೆದುಕೊಂಡಿದ್ದು, ಸ್ಟಾರ್ ನಟ-ನಟಿಯರಿಗೆ ಒಳ್ಳೆಯ ಪೈಪೋಟಿ ನೀಡುತ್ತಿದ್ದಾರೆ.
ಆ ಪೈಕಿ ಸದಾ ಮನೆಯಲ್ಲಿ ಎಲ್ಲರನ್ನು ನಗಿಸಿಕೊಂಡು ಓಡಾಡುವ, ನೋಡುಗರ ಮನಕ್ಕೆ ಖುಷಿ ನೀಡುವ ಪಾವಗಡ ಮಂಜು ಈ ಬಾರಿಯ ಬಿಗ್ ಬಾಸ್ ವಿನ್ನರ್ ಎಂದು ಭವಿಷ್ಯ ನುಡಿದಿದ್ದಾರೆ ಶಂಕರ್ ಅಶ್ವಥ್ .