ನವದೆಹಲಿ: ಕಾರ್ತಿಕ ಪೂರ್ಣಿಮೆಯ ದಿನವಾದ ಇಂದು ಸಿಖ್ಖ್ ಧರ್ಮದ ಸಂಸ್ಥಾಪಕರಾದ ಗುರುನಾನಕ್ರ ಜನ್ಮದಿನ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಸಿಖ್ಖ್ರ ಧರ್ಮಗುರುವಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಗುರುನಾನಕ್ರ ಜೀವನಾದರ್ಶಗಳನ್ನು ಈ ವೇಳೆಯಲ್ಲಿ ಸ್ಮರಿಸಿರುವ ನರೇಂದ್ರ ಮೋದಿ ಅವರು, ಜಗತ್ತಿನ ಒಳಿತಿಗೆ, ಶ್ರೇಯಸ್ಸಿಗೆ ಶ್ರೀ ಗುರುನಾನಕ್ರ ಚಿಂತನೆಗಳು ಮಾರ್ಗದರ್ಶನವಾಗಲಿ. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
I bow to Sri Guru Nanak Dev Ji on his Parkash Purab. May his thoughts keep motivating us to serve society and ensure a better planet.
— Narendra Modi (@narendramodi) November 30, 2020
ಸಿಖ್ಖ್ರ ಮೊದಲ ಧರ್ಮಗುರು ಗುರುನಾನಕ್ ದೇವರು 1469 ನೇ ಇಸವಿಯಲ್ಲಿ ಈಗಿನ ಪಾಕಿಸ್ಥಾನದ ನಾನ್ಕನಾದಲ್ಲಿ ಜನಿಸಿದರು.
ಅವರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಗುರುನಾನಕ್ ಅವರನ್ನು ನೆನಪಿಸಿಕೊಳ್ಳುವ ಮೂಲಕ ನಮನ ಸಲ್ಲಿಸಿದ್ದಾರೆ.