ಮದ್ಯದಂಗಡಿ ತೆರೆದಿದ್ದರ ಫಲ… ಇನ್ನೂ ಏನೇನು ನೋಡಬೇಕೋ..?
ಮುಳಬಾಗಿಲು: ಕುಡಿದ ಮತ್ತಿನಲ್ಲಿ ಯುವಕನೋರ್ವ ಹಾವೊಂದನ್ನು ಬಾಯಿಯಿಂದ ಕಚ್ಚಿ, ಸಿಗಿದು ಕೊಂದಿರುವ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಷ್ಟೂರಿನಲ್ಲಿ ಈ ಘಟನೆ ನಡೆದಿದ್ದು, ಈ ಯುವಕ ಕುಡಿದುಕೊಂಡೇ ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ವೇಳೆ ಹಾವೊಂದು ದಾರಿಯಲ್ಲಿ ಅಡ್ಡ ಸಿಕ್ಕಿದೆ. ತಕ್ಷಣ ಆತ ಆ ಹಾವನ್ನು ಎತ್ತಿ ಕೊರಳಿಗೆ ಸುತ್ತಿಕೊಂಡು ಬೈಕ್ ಮೇಲೆ ಕುಳಿತಂತೆಯೇ ಕುಡಿದು, ಹಾವನ್ನು ತನ್ನ ಬಾಯಿಯಿಂದ ಕಚ್ಚಿ, ಅದನ್ನು ಸಿಗಿದು ಸಾಯಿಸಿದ್ದಾನೆ.
ಈ ದೃಶ್ಯವನ್ನು ನೂರಾರು ಮಂದಿ ನಿಂತು ನೋಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ