ಜಿಲ್ಲಾ ಸುದ್ದಿಗಳು

ಶಿವಮೊಗ್ಗ: ರೈಲ್ವೆ ಕ್ರಷರ್ ಬ್ಲಾಸ್ಟ್‌ ಪರಿಣಾಮ ಭಾರೀ ಶಬ್ದ, ಭೂಮಿ ಕಂಪನ

 

 

ಶಿವಮೊಗ್ಗ: ಜಿಲ್ಲೆಯ ಹುಣಸವಾಡಿ ಎಂಬಲ್ಲಿ ರೈಲ್ವೆ ಕ್ರಷರ್‌ನಲ್ಲಿ ಸಂಭವಿಸಿದ ಭಾರೀ ಸ್ಪೋಟದ ಪರಿಣಾಮ ಜಿಲ್ಲೆಯಲ್ಲಿ ಭಾರೀ ಶಬ್ದ ಹಾಗೂ ಕಂಪನ ಸಂಭವಿಸಿದೆ ಎಂದು ವರದಿಯಾಗಿದೆ.

ಶಿವಮೊಗ್ಗ ತಾಲೂಕಿನ ಅಬ್ಬಲಗೆರೆಯಲ್ಲಿ ರೈಲ್ವೆ ಕ್ವಾರಿಯಲ್ಲಿ ಸಂಭವಿಸಿದ ಭಾರೀ ಸ್ಪೋಟದ ಪರಿಣಾಮ ಕಂಪನ ಸಂಭವಿಸಿದೆ. 50 ಡೈನಾಮೆಟ್ ಏಕಕಾಲದಲ್ಲಿ ಸ್ಫೋಟಗೊಂಡ ಪರಿಣಾಮ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಬಿಹಾರ ಮೂಲದ 10 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಭೂಕಂಪ ವದಂತಿ: ಆತಂಕದಲ್ಲಿ ಜನತೆ

ಶಿವಮೊಗ್ಗ, ಭದ್ರಾವತಿ ಸೇರಿದಂತೆ ಜಿಲ್ಲೆ ಹಾಗೂ ಚಿಕ್ಕಮಗಳೂರು, ಕುಂದಾಪುರಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪನ ಸಂಭವಿಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಜನತೆಯಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಇಂದು ರಾತ್ರಿ 10.30ರ ವೇಳೆಗೆ ಜಿಲ್ಲೆಯಾದ್ಯಂತ ಭಾರೀ ಶಬ್ದ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಭೂಮಿ ಕಂಪಿಸಿದ ಅನುಭವವಾಗಿದೆ. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ, ಆಯನೂರು, ಹಾರನಹಳ್ಳಿ, ಮಾಚೇನಹಳ್ಳಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ.

ಇನ್ನು, ನಗರದ ಖಾಸಗಿ ಆಸ್ಪತ್ರೆ, ಹೊಟೇಲ್ ಒಂದರಲ್ಲಿ ಹಾಗೂ ನವುಲೆಯಲ್ಲಿರುವ ಕೃಷಿ ಕಾಲೇಜಿನ ಹಾಸ್ಟೆಲ್’ನಲ್ಲಿ ಬಾಗಿಲು, ಕಿಟಕಿಗಳು ಅಲುಗಾಡಿದ್ದು, ಗಾಜುಗಳು ಒಡೆದುಬಿದ್ದಿವೆ ಎಂದು ವರದಿಯಾಗಿದೆ.
ಆದರೆ, ಕೇಳಿಬಂದ ಶಬ್ದವೇನು, ಭೂಮಿ ನಡುಗಲು ಕಾರಣವೇನು ಎಂಬುದನ್ನು ಅಧಿಕಾರಿಗಳು ಯಾವುದೇ ರೀತಿಯಲ್ಲೂ ಸ್ಪಷ್ಟಪಡಿಸಿಲ್ಲ.

ಜನತೆ ಮಾತ್ರ ಮನೆಗಳಿಂದ ಹೊರಗೆ ಬಂದಿದ್ದು, ಭಯದಿಂದಲೇ ರಾತ್ರಿ ಕಳೆಯುವಂತಾಗಿದೆ.

info and Photo courtesy: Kalpa Media House Shivamogga

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ದ.ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಪ್ರೊ ಎ.ವಿ ನಾವಡ, ಡಾ. ಯು.ವಿ ಶೆಣೈ, ಪತ್ರಕರ್ತ ಜಿನ್ನಪ್ಪ ಗೌಡ ಸೇರಿ 38 ಮಂದಿಗೆ ಪುರಸ್ಕಾರ

Upayuktha

ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಂಭವ

Harshitha Harish

ಆತ್ಮನಿರ್ಭರ ಭಾರತ: ಕಲಬುರಗಿಯ ಮಾಧವ ಗೋಶಾಲೆಯಿಂದ ಪರಿಸರ ಸ್ನೇಹಿ ಗೋಮಯದ ಆಲಂಕಾರಿಕ ಉತ್ಪನ್ನಗಳು

Upayuktha