ಸುರತ್ಕಲ್: ಹಿಂದೂ ಯುವಸೇನೆ ಓಂಕಾರ ಘಟಕ, ಓಂಕಾರ ಮಹಿಳಾ ಘಟಕ ಇದರ ಆಶ್ರಯದಲ್ಲಿ ಮಾ.7ರ ಆದಿತ್ಯವಾರ ಬೆಳಗ್ಗಿನ 5 ಗಂಟೆಯಿಂದ ಕಟೀಲು ಕ್ಷೇತ್ರಕ್ಕೆ “ಧರ್ಮ ಜಾಗೃತಿ ನಡೆ” ಪಾದಯಾತ್ರೆ ನಡೆಯಲಿದೆ.
ಕಾಂತೇರಿ ಧೂಮಾವತಿ ದೇವಸ್ಥಾನ ಸುರತ್ಕಲ್ನಿಂದ ಕೃಷ್ಣಾಪುರ ಕಾಟಿಪಳ್ಳ, ಶಿಬರೂರು ಎಕ್ಕಾರು ಮಾರ್ಗವಾಗಿ 3ನೇ ವರ್ಷದ ಪಾದಯಾತ್ರೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳುವಂತೆ ಸಂಘಟಕರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ದಿನಾಂಕ 14ರ ಆದಿತ್ಯವಾರ ಬೆಳಗ್ಗೆ ಗಂಟೆ 9ರಿಂದ 1ರ ತನಕ ಕರ್ನಾಟಕ ಸೇವಾ ವೃಂದ ಸುರತ್ಕಲ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಲಿರುವುದು. ಯುವಸೇನೆ ಅಧ್ಯಕ್ಷರ ಮಾರ್ಗದರ್ಶನದಲ್ಲಿ ರಕ್ತನಿಧಿ ಸಂಚಾಲಕ ನಿಶಾಂತ್ ಶೆಟ್ಟಿ ಜೆಪ್ಪಿನಮೊಗರು ಅವರು ಕಾರ್ಯಕ್ರಮ ನೆರವೇರಿಸಲಿದ್ದು ಸಂಗ್ರಹವಾದ ರಕ್ತವನ್ನು ಬಡವರಿಗೆ ನೀಡುವ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರ್ ಚಂದ್ರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮನಪಾ ಸದಸ್ಯೆ ಸರಿತಾ ಶಶಿಧರ್, ಹಿಂದೂ ಮಜದುರ್ ಸಂಘ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ್ ಚೌಟ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪುರುಷೋತ್ತಮ್ ಬಂಗೇರ ಕಾಟಿಪಳ್ಳ, ನಾಗೇಶ್ ಶೆಟ್ಟಿ ಅಗರಮೇಲೂ, ಉದಯ ಶೆಟ್ಟಿ ಇದ್ಯಾ, ತಿಲಕ್ ರಾಜ್ ಕೃಷ್ಣಾಪುರ, ಸುಧಾಕರ ಕರ್ಕೇರ, ವಸಂತ್ ಆಚಾರ್ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ