ನಗರ ಸ್ಥಳೀಯ

ಕರವೇ ಉಳ್ಳಾಲ ಘಟಕ, ಬ್ಲ‌ಡ್ ಹೆಲ್ಪ್‌ ಕೇರ್‌ ಕರ್ನಾಟಕ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಉಳ್ಳಾಲ: ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ಘಟಕ, ಬ್ಲಡ್ ಹೆಲ್ಪ್‌ ಕೇರ್ ಕರ್ನಾಟಕ (ರಿ.) ಸಂಯುಕ್ತ ಆಶ್ರಯದಲ್ಲಿ ಕೆಎಂಸಿ ರಕ್ತ ನಿಧಿ ಮಂಗಳೂರು ಸಹಯೋಗದಲ್ಲಿ 80ನೇ ಬೃಹತ್ ರಕ್ತದಾನ ಶಿಬಿರ ಉಳಾಲ ಕೋಟೆಪುರ ಟಿಪ್ಪು ಸುಲ್ತಾನ್ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್ ಮುಡಿಪು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಿಷ್ಕಳಂಕವಾಗಿರುವ ಸಮಾಜ ಸೇವೆಯ ತುಡಿತ ದೇವರ ಸಂತೃಪಿಗೆ ಪಾತ್ರವಾಗಲಿದೆ, ಸಾವಿರಾರು ರೋಗಿಗಳು ದಿನ ನಿತ್ಯ ರಕ್ತದ ಸಮಸ್ಯೆಯಿಂದ ಬಳಲುತ್ತಿದ್ದು ಅಂತವರಿಗೆ ರಕ್ತವನ್ನು ಪೂರೈಸಲು ಇಂತಹ ಸಮಾಜಮುಖಿ ಕಾರ್ಯದಿಂದ ಸಾಧ್ಯ. ಹೆಚ್ಚು ಹೆಚ್ಚು ಯುವಕರು ರಕ್ತದಾನ ಮಾಡುವ ಮೂಲಕ ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಅಧ್ಯಕ್ಷ ನಝೀರ್ ಹುಸೈನ್ ಮಾತನಾಡಿ, ನಾವು ಸುಮಾರು 3 ವರ್ಷದಲ್ಲಿ, 80 ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ; ವಿವಿಧ ಆಸ್ಪತ್ರೆಗಳಿಗೆ ಸುಮಾರು, 4,000ದಿಂದ 5,000 ಯುನಿಟ್ ನಷ್ಟು ರಕ್ತವನ್ನು ಸಂಗ್ರಹಿಸಿ ಕೊಟ್ಟಿದ್ದೇವೆ. ಕೊರೋನಾ ಸಂದರ್ಭದಲ್ಲೂ ರಕ್ತದ ಅವಶ್ಯಕತೆ ಇರುವವರಿಗೆ ರಕ್ತವನ್ನು ಪೂರೈಸಿದ್ದೇವೆ. ನಾವು ಸೃಷ್ಠಿಕರ್ತನ ಅನುಗ್ರಹಕ್ಕಾಗಿ ಈ ಕೆಲಸವನ್ನು ಮಾಡುತ್ತಿದ್ದೇವೆ. ಮುಂದೆಯೂ ಕರ್ನಾಟಕ ರಕ್ಷಣಾ ವೇದಿಕೆಯ ಸಹಕಾರ, ಪ್ರೋತ್ಸಾಹ ಬೇಕೆಂದು ಹೇಳಿದರು.

ಕೆ.ಎಂ.ಸಿ ರಕ್ತ ನಿಧಿ ವಿಭಾಗದ ತಾಂತ್ರಿಕ ಮುಖ್ಯಸ್ಥೆ ಶ್ರೀ ಜಿ.ಥೋಮಸ್ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜ ಸೇವಕ ಎ.ಕೆ.ಮೊಯಿದಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಸಲಹೆಗಾರರಾದ ಸುಲೈಮಾನ್ ಶೇಕ್ ಬೆಳುವಾಯಿ,ಕರ್ನಾಟಕ ರಕ್ಷಣಾ ವೇದಿಕೆಯ ಉಳ್ಳಾಲ ಘಟಕದ ಅಧ್ಯಕ್ಷ ಫೈರೋಝ್ ಡಿ.ಎಂ, ಕಾರ್ಯದರ್ಶಿ ಮುರುಗೇಶ್ ಉಳ್ಳಾಲ್, ಸದಸ್ಯರಾದ ಇಫ್ತಿಕಾರ್ ಅಹ್ಮದ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ, ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಲಾಯಿ, ಕೋಶಾಧಿಕಾರಿ ಸತ್ತಾರ್ ಪುತ್ತೂರು, ಕಾರ್ಯದರ್ಶಿ ಬಶೀರ್ ಮಂಗಳೂರು, ಮಾಧ್ಯಮ ಕಾರ್ಯದರ್ಶಿ ಜಲೀಲ್ ಉಳ್ಳಾಲ, ರಕ್ತ ಪೂರೈಕೆ ವಿಭಾಗದ ಉಸ್ತುವಾರಿ ಮುಸ್ತಫ ಕೆ.ಸಿ.ರೋಡ್, ಶಿಬಿರದ ಕಾರ್ಯನಿರ್ವಾಹಕ ಅಲ್ಮಾಝ್ ಉಳ್ಳಾಲ, ಶಹಜಹಾನ್ ಮುಕ್ಕ, ಖಾದರ್ ಮುಂಚೂರು ,ರಾಫೀಝ್ ಕೃಷ್ಣಾಪುರ, ಮೊದಲಾದವರು ಉಪಸ್ಥಿತರಿದ್ದರು.

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಸಂಚಾಲಕರಾದ ಶಂಶುದ್ದೀನ್ ಬಳ್ಕುಂಜೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯನಿರ್ವಾಹಕರಾದ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಶ್ರೀ ಭಾರತೀ ಕಾಲೇಜಿನಲ್ಲಿ ಆಯುಧಪೂಜೆ, ವಾಹನ ಪೂಜೆ

Upayuktha

ಕಾರ್ಕಳ ವಿನಾಯಕಬೆಟ್ಟು ದೇವಸ್ಥಾನದ ಬಳಿ ಸಂಭ್ರಮದ ಗೋಪೂಜೆ

Upayuktha

ವರ್ಕಾಡಿ: ಎಲ್‌ಎಲ್‌ಬಿ ವಿದ್ಯಾರ್ಥಿ ಆತ್ಮಹತ್ಯೆ

Upayuktha