ನಗರ ಸಮುದಾಯ ಸುದ್ದಿ ಸ್ಥಳೀಯ

ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬಿ.ಎಂ ಇದಿನಬ್ಬ ಜನ್ಮಶತಮಾನೋತ್ಸವ, ಪ್ರಶಸ್ತಿ ಪ್ರದಾನ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿವಂಗತ ಬಿ.ಎಂ. ಇದಿನಬ್ಬ ಜನ್ಮಶತಮಾನೋತ್ಸವ ಹಾಗೂ ಬಿ.ಎಂ.ಇದಿನಬ್ಬ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನಡೆಯಿತು.

ದಿವಂಗತ ಬಿ.ಎಂ. ಇದಿನಬ್ಬ ಗೌರವ ಪ್ರಶಸ್ತಿಯನ್ನು ಮೂಡಬಿದ್ರೆಯ ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವರಿಗೆ ಪ್ರದಾನ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಅರೇಬಿಕ್ ಭಾಷೆಯಲ್ಲಿ ಕೋರ್ಸ್, ಮುಸ್ಲಿಮರ ಜಾನಪದ ಕಲೆಗಳ ಬಗ್ಗೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮಾತ್ರ ಕೋರ್ಸ್ ನೀಡಲಾಗುತ್ತಿದೆ ಎಂದರು. ಬಿ.ಎಂ. ಇದಿನಬ್ಬರ ಕುರಿತಾದ ಮಹತ್ವದ ಕೃತಿ ಹೊರತರಲು ನಾನು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ದಿವಂಗತ ಬಿ.ಎಂ. ಇದಿನಬ್ಬರ ಮಕ್ಕಳಾದ ಬಿಎಂ ಅಬ್ದುರಹ್ಮಾನ್ ಬಾಷಾ, ಬಿಎಂ ಬದ್ರುದ್ದೀನ್, ಫಾತಿಮಾ, ಖತೀಜಮ್ಮ, ನಫೀಸಾ, ಝುಬೈದಾ, ಮೊಮ್ಮಗ ಶಬೀರ್ ಹಸನ್ ರನ್ನು ಸನ್ಮಾನಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕಲ್ಕೂರ ಸಂಸ್ಮರಣಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಹರಿಕೃಷ್ಣ ಪುನರೂರು, ಅಬ್ದುಲ್ ರಶೀದ್ ಪಾಲ್ಗೊಂಡಿದ್ದರು. ಇದೇ ವೇಳೆ ಬಿ.ಎಂ. ಇದಿನಬ್ಬ ಬದುಕು ಮತ್ತು ಬರಹ ವಿಷಯದಡಿಯಲ್ಲಿ ಕವಿಗೋಷ್ಟಿ, ವಿಚಾರಗೋಷ್ಟಿ ನಡೆಯಿತು‌‌. ಬ್ಯಾರಿ ಕವಾಲಿ, ಬ್ಯಾರಿ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕೊರೊನಾ ಆತಂಕ: ಬಂಟ್ವಾಳದ ಪೆಟ್ರೋಲ್ ಬಂಕ್ ಕಾರ್ಮಿಕ ಆತ್ಮಹತ್ಯೆಗೆ ಶರಣು

Upayuktha

ಡಿ.27ಕ್ಕೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ದ.ಕ ಜಿಲ್ಲಾ ಭೇಟಿ

Upayuktha

ಭಾರತೀಯ ಸಂಸ್ಕೃತಿಗೆ ಅಳಿವಿಲ್ಲ: ರವಿಶಂಕರ್

Upayuktha