ಮುಂಬೈ: ಬಾಲಿವುಡ್ ಬೆಬೊ ಕರೀನಾ ಕಪೂರ್ ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ಕರೀನಾ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ, ಈ ಮೂಲಕ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ದಂಪತಿ ಎರಡನೇ ಮಗುವಿನ ತಂದೆ ತಾಯಿಯಾಗಿದ್ದಾರೆ.
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಈಗಾಗಲೇ ನಾಲ್ಕು ವರ್ಷದ ಮಗನಿದ್ದಾನೆ.