ಕತೆ-ಕವನಗಳು

*ಬ್ರಹ್ಮಚಾರಿಣಿ*

ಪಾರ್ವತಿಯ ದ್ವಿತೀಯ ರೂಪವ ಹೊತ್ತವಳೇ,ರುದ್ರಾಕ್ಷಿ ಮಾಲೆಯ ಕೈಯಲ್ಲಿ ಹಿಡಿದವಳೇ


ಬ್ರಹ್ಮಚಾರಿಣಿ..

ಪವಿತ್ರ ಜ್ಞಾನದ ರೂಪ,ಹಟ ಸಾಧನೆಯ ಪ್ರತಿರೂಪ,ಶಿವನ ಉಳಿಸಿಕೊಳ್ಳಲು ಮಾಡಿದಳು ಘೋರ ತಪ..

ಶಿವನ ಮನವೊಲಿಸಲು ದೇವತೆಗಳು ಮಾಡಿದರು ತಂತ್ರ, ಮನ್ಮಥನಿಂದ ಪ್ರೇಮ ಬಾಣವ ಶಿವನ ಮೇಲೆ ಬಿಟ್ಟರು, ಕುಪಿತ ಶಿವನು ಕೋಪದಿಂದ ಮೂರನೇ ಕಣ್ಣ ಬಿಟ್ಟು ಮನ್ಮಥನಾದ ಹತ..

ಕೊನೆಗೂ ಬ್ರಹ್ಮಚಾರಿಣಿ ಪಾರ್ವತಿ ಗೆದ್ದಳು ಶಿವನ ಮನ, ಮತ್ತೆ ಆದಳು ಶಿವನ ಪ್ರಿಯ ಪತ್ನಿ ಸತಿ..

ಬ್ರಹ್ಮಚಾರಿಣಿ ಎಂದರೆ ತ್ಯಾಗ ಸ್ಥಿರತೆಯ ದ್ಯೋತಕ,ಶಾಂತಚಿತ್ತ ಸದ್ಗುಣ,ಸ್ವಯಂ ನಿಯಂತ್ರಣದ ದೀಪಕ..

ಬ್ರಹ್ಮಚಾರಿ ಮಂಗಳನ ಅಧಿಪತಿ, ನೆಮ್ಮದಿಯ ನೀಡುವ ಸೌಮ್ಯ ರೂಪಿಣಿ,ಮಲ್ಲಿಗೆ ಪ್ರಿಯ ದೇವಿ ಬ್ರಹ್ಮಚಾರಿಣಿ..

✍ *ನಾಗಶ್ರೀ. ಎಸ್. ಭಂಡಾರಿ* *ಮೂಡುಬಿದಿರೆ*

ಫೋಟೋ ಕ್ರೆಡಿಟ್:
*ಮಾನಸ ಫೋಟೋಗ್ರಫಿ*

Related posts

ನನ್ನೆದೆಯ ಕನಸು

Harshitha Harish

ಕವನ: ನಾವೆಯ ಪಯಣ

Upayuktha

🙏 ರಕ್ಷಾ ಬಂಧನ 🙏

Upayuktha

Leave a Comment