ಕಲೆ ಸಂಸ್ಕೃತಿ ಪ್ರತಿಭೆ-ಪರಿಚಯ

ಪ್ರತಿಭೆ: ಕುಂಚಲೋಕದಲ್ಲಿ ಮೂಡುತ್ತಿರುವ “ವೈಶಾಖ” ನ ಚಿತ್ತಾರ

ಬಿಳಿ ಹಾಳೆಯ ಮೇಲೆ ಕಪ್ಪು ಚುಕ್ಕಿಗಳನ್ನು ಇಡುತ್ತಾ, ತಮ್ಮ ವಿಭಿನ್ನವಾದ ಆಲೋಚನೆಗಳ ಮೂಲಕ ಚಿತ್ರಗಳಿಗೆ ಜೀವ ತುಂಬಿಸಿ, ಅರೆ ಇದು ನೈಜವೋ, ಭಾವಚಿತ್ರವೋ ಎಂಬಂತೆ ವಿಸ್ಮಿತರಾಗಿ ಚಿತ್ರವನ್ನು ತಡವಿ ನೋಡುವಂತೆ ಮಾಡುವುದು ಕಲಾವಿದರ ಕೌಶಲ್ಯ. ಇಂತಹ ಅದ್ಭುತ ವೇದಿಕೆಯಲ್ಲಿ ಬೆಳಗುತ್ತಿರುವವರು ವೈಶಾಖ್ ಆಚಾರ್ಯ.

ಮೂಲತಃ ವಿಟ್ಲ ತಾಲೂಕಿನ ಅಳಿಕೆ ನಿವಾಸಿಗಳಾದ ಪಾಂಡುರಂಗ ಆಚಾರ್ಯ ಮತ್ತು ಕೀರ್ತಿರೇಖಾ ದಂಪತಿಗಳ ಸುಪುತ್ರ. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದರು. ಇವರ ಅಣ್ಣನೂ ಚಿತ್ರಗಾರನಾಗಿದ್ದ ಕಾರಣ ಅವರನ್ನು ನೋಡುತ್ತಾ ತಮ್ಮ ಕೈಯಲ್ಲೂ ಕೊಂಚವನ್ನೂ ಹಿಡಿಯಲು ಪ್ರಾರಂಭಿಸಿದರು.

ಇವರ ಈ ಆಸಕ್ತಿಗೆ ಹೆತ್ತವರು, ಗೆಳೆಯರು ಇಂಬು ಕೊಡುತ್ತಾ ಒಬ್ಬ ಉತ್ತಮ ಕಲಾವಿದನಾಗುವಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ. ತಮ್ಮ ಪ್ರೌಢ ಶಿಕ್ಷಣದ ಹಂತದಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬರುವುದರ ಮೂಲಕ ಇದೆ ಕ್ಷೇತ್ರದಲ್ಲಿ ಅಗಾಧವಾದ ಆಸಕ್ತಿಯನ್ನು ತೋರಿದರು.

ಚಿತ್ರಕಲೆಯಲ್ಲಿ ವಿಧವಿಧವಾದ ಚಿತ್ತಾರಗಳನ್ನು ಬಿಡಿಸುತ್ತಾ ನೋಡುಗರನ್ನು ಮೂಕವಿಸ್ಮಿತರಾಗುವಂತೆ ತನ್ನ ಚಿತ್ರಕೌಶಲ್ಯವನ್ನು ಮುಂದುವರಿಸುತ್ತಿದ್ದಾರೆ. ಚಿತ್ರಕಲೆಯಲ್ಲಿ ಗುರುತಿಸಿಕೊಂಡಿರುವ ಇವರು ಬಟ್ಟೆಗಳ ಮೇಲೆ ವರ್ಣರಂಜಿತ ಆಯಿಲ್ ಪೇಂಟಿಂಗ್ಸ್ ಮಾಡುವ ಮೂಲಕ ಅದರ ಅಂದವನ್ನು ಹೆಚ್ಚಿಸುವ ಇವರ ಕಲಾ ಸಾಮರ್ಥ್ಯವನ್ನೂ ಮೆಚ್ಚಲೇಬೇಕು.

ಮ್ಯೂರಲ್ ಪೇಂಟಿಂಗ್ಸ್, ವಾಟರ್ ಕಲರ್ ಪೇಂಟಿಂಗ್ಸ್, ಟ್ರೆಡಿಷನಲ್ ಪೇಂಟಿಂಗ್ಸ್ ಹೆಚ್ಚಾಗಿ ಬಿಡಿಸುತ್ತಾರೆ. ಖಾಲಿ ಗೋಡೆಗಳ ಮೇಲೆ ಇವರ ಕೈಚಳಕದಿಂದ ಮೂಡುವ ಚಿತ್ತಾರವನ್ನೂ ನೋಡೋದೇ ಒಂದು ಚಂದ. ಅಲ್ಲದೇ ಡಿಜಿಟಲ್ ಆರ್ಟ್ ನಲ್ಲಿ ಹೆಚ್ಚಾಗಿ ತೊಡಗಿಕೊಂಡಿರುವ ಇವರ ಕಲಾಸಕ್ತಿಗೆ ಮಾರುಹೋಗಿ ಮಂಗಳೂರು ಅಲ್ಲದೇ ಬೆಂಗಳೂರಿಗರು ಕೂಡ ಬೇಡಿಕೆಯಿಡುತ್ತಿದ್ದಾರೆ. ಇದರ ಜೊತೆಗೆ ಕ್ಲೇ ಮೊಡೆಲಿಂಗ್ ಮಾಡುವುದರಲ್ಲಿಯೂ ಎತ್ತಿದ ಕೈ.

ಆರ್ಟ್ ಕೇವಲ ಬಣ್ಣಗಳಿಂದ ಕೂಡಿದ್ದು ಅಲ್ಲ; ಅದು ಇತರರಿಗೆ ಮಾತಿನ ಮೂಲಕ ಹೇಳಲಾಗದ್ದನ್ನು ನಮ್ಮ ಭಾವನೆಗಳ ಮೂಲಕ ಬಿಡಿಸಿಕೊಳ್ಳುವುದು ಎಂದು ಹೇಳುವ ಇವರಿಗೆ ತನ್ನ ಪೇಂಟಿಂಗ್ಸ್ ಪ್ರತಿಯೊಬ್ಬರಿಗೂ ಪರಿಚಯವಾಗಬೇಕು, ಪೇಂಟಿಂಗ್ಸ್‌ನಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳಬೇಕೆಂಬ ಮಹದಾಸೆ ಇದೆ. ಇದರ ಜೊತೆಗೆ ತಮ್ಮದೇ ಸ್ವಂತ ಕಂಪೆನಿ ಪ್ರಾರಂಭಿಸಬೇಕೆಂಬ ಆಸೆಯಿದೆ.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡಿಬಾಗಿಲು ಶಾಲೆಯಲ್ಲಿ, ಪ್ರೌಢ ಹಾಗೂ ಪಿ.ಯು ಶಿಕ್ಷಣವನ್ನೂ ಶ್ರೀ ಸತ್ಯ ಸಾಯಿ ಅಳಿಕೆಯಲ್ಲಿ ಪಡೆದಿರುತ್ತಾರೆ. ಪ್ರಸ್ತುತ ಮಂಗಳೂರಿನ ವಿಶುವಲ್ ಆರ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

-ನೀತಾ ರವೀಂದ್ರ
ದ್ವಿತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜ್ ಪುತ್ತೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಯಕ್ಷಗಾನದ ಹಾಡುಗಾರಿಕೆಯಲ್ಲಿ ರಾಗಗಳ ಬಳಕೆ

Upayuktha

‘ನೃತ್ಯಾಂಗನ್’ ಸಂಸ್ಥೆಯಿಂದ ವಿನೂತನ ನೃತ್ಯಪ್ರಯೋಗ – ‘ನವಸಂಗಮ’

Upayuktha

ಪ್ರತಿಭೆ: ಧ್ವನಿ ಮಾಂತ್ರಿಕ, ಕಲಾವಿದ, ಡಿಜಿಟಲ್ ಆರ್ಟಿಸ್ಟ್ ಕಿರಿಕ್ ಕಾರ್ತಿಕ್

Upayuktha

Leave a Comment