ಅಪರಾಧ ಗ್ರಾಮಾಂತರ

ಕಡಬ: ಮನೆಯಿಂದ ಲಕ್ಷಾಂತರ ರೂ ಚಿನ್ನಾಭರಣ, ನಗದು ದೋಚಿದ ಕಳ್ಳರು

ಕಡಬ: ಕಡಬ ತಾಲೂಕಿನ ಕುಂತೂರು ಗ್ರಾಮದ ನೂಚಿಲ ನಿವಾಸಿ ಅನಿಸ್ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ ಘಟನೆ ನಡೆದಿದೆ.

ಮನೆಯ ಹಿಂದಿನ ಬಾಗಿಲಿನ ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಕಪಾಟನ್ನು ಜಾಲಾಡಿದ್ದಾರೆ. ಮನೆಯಲ್ಲಿ ಮಲಗಿದ್ದ ಅನಿಸ್ ಅವರ ಪತ್ನಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ತಾಯಿ ಅವರಲ್ಲಿದ್ದ ಚಿನ್ನ, ತಾಯಿಯ ಕಾಲಲ್ಲಿದ್ದ ಚಿನ್ನವನ್ನು ತೆಗೆಯುವ ಸಂದರ್ಭ ಎಚ್ಚರಗೊಂಡಾಗ ಕಳ್ಳರು ಪರಾರಿಯಾಗಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಸುಮಾರು 12 ಪವನ್ ಚಿನ್ನ ಕಳ್ಳತನವಾದ ಬಗ್ಗೆ ವರದಿಯಾಗಿದೆ. ಈ ಮನೆಯ ಪಕ್ಕದ ಸೈಮನ್ ಎಂಬುವವರ ಮನೆಯ ಬಾಗಿಲು ಒಡೆದು ನುಗ್ಗಿ ಮನೆಯಲ್ಲಿದ್ದ ಸುಮಾರು 5000 ರೂ ಕಳ್ಳತನ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಶ್ವಾನ ದಳ ಅಗಮಿಸಿ ಪರಿಶೀಲನೆ ನಡೆಸಲಾಗಿದೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ ಪೊಲೀಸರ ತಂಡವು ಸ್ಥಳಕ್ಕೆ ಭೇಟಿ ನೀಡಿ,ಮಾಹಿತಿ ಕಲೆ ಹಾಕುತ್ತಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕಟೀಲು ದೇವಳದ ಸಮೀಪದ ಅಶ್ವತ್ಥ ಮರಗಳ ಸ್ಥಳಾಂತರ

Upayuktha

14 ಟನ್ ಬೂದುಗುಂಬಳ ಬೆಳೆದ ಕಾಸರಗೋಡು ಕೃಷಿಕನ ನೆರವಿಗೆ ಬಂದ ಕೇರಳ ಸರಕಾರ

Upayuktha

ರಾಮನೈವೇದ್ಯಕ್ಕೆ ಭತ್ತದ ಭಕ್ತಿ: ಕುಂಬಳೆ ಸೀಮೆಯಲ್ಲಿ ಭಕ್ತಿಯ ಬೇಸಾಯಕ್ಕಿಳಿದ ಶಿಷ್ಯವೃಂದ

Upayuktha