ಗ್ರಾಮಾಂತರ ಸ್ಥಳೀಯ

ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರಕ್ಕೆ ಉದ್ಯಮಿ ಸತೀಶ್ ಶೆಟ್ಟಿ ಭೇಟಿ

ಬದಿಯಡ್ಕ: ಶ್ರೀ ಗೋಪಾಲ ಕೃಷ್ಣ ಭಜನಾ ಮಂದಿರ ಅಗಲ್ಪಾಡಿ ಜಯನಗರಕ್ಕೆ ಇಂದು ಹೆಸರಾಂತ ಉದ್ಯಮಿ, ಧಾರ್ಮಿಕ ಶ್ರದ್ದಾ ಕೇಂದ್ರಗಳ ವಿಶಿಷ್ಟ ಅಭಿಮಾನಿ ಹಾಗೂ ಕೊಡುಗೈ ದಾನಿ ಸತೀಶ್ ಶೆಟ್ಟಿ ಉಜಂತೋಡಿ ಬೆಂಗಳೂರು ಅವರು ಭೇಟಿ ನೀಡಿದರು.

ಸರಳ ವ್ಯಕ್ತಿತ್ವದ ಸತೀಶ್ ಶೆಟ್ಟಿಯವರು ಶ್ರೀ ಗೋಪಾಲ ಕೃಷ್ಣ ಭಜನಾ ಮಂದಿರಕ್ಕೆ ತನ್ನ ಬಾಲ್ಯಕಾಲದಲ್ಲಿ ಅಗಲ್ಪಾಡಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಧರ್ಭದಲ್ಲಿ ನಿತ್ಯ ಕೈಮುಗಿದು, ಪ್ರಸಾದ ಸ್ವೀಕರಿಸಿ ತೆರಳುತ್ತಿದ್ದುದನ್ನು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶ್ರೀಮಂದಿರಕ್ಕೆ ಆಗಮಿಸಿದ ಸತೀಶ್ ಶೆಟ್ಟಿ ಅವರನ್ನು ಯಾದವ ಸೇವಾ ಸಂಘದ ರಕ್ಷಾಧಿಕಾರಿಗಳೂ ಹಿರಿಯ ಸದಸ್ಯರೂ ಅದ ನಾರಾಯಣ ಮಣಿಯಾಣಿ ಚೋಕೆ ಹಾಗೂ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಬಾಬು ಮಾಸ್ಟರ್ ಅಗಲ್ಪಾಡಿ ಅವರು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.

ಕಾರ್ಯದರ್ಶಿ ರಾಜೇಶ್ ಮಾಸ್ಟರ್ ಅಗಲ್ಪಾಡಿ ಸ್ವಾಗತಿಸಿದರು. ಅಧ್ಯಕ್ಷರಾದ ಬಾಬುಮಾಸ್ಟರ್ ಅಗಲ್ಪಾಡಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಗೋಪಾಲ ಕೃಷ್ಣ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರ್, ಸತೀಶ್ ಶೆಟ್ಟಿಯವರ ವ್ಯಕ್ತಿ ಪರಿಚಯ ಮಾಡಿದರು. ಶ್ರೀಧರ ಪದ್ಮಾರ್ ಕಾರ್ಯಕ್ರಮ ಕ್ಕೆ ಧನ್ಯವಾದಗಳನ್ನು ಸಮರ್ಪಿಸಿದರು.

ಸತೀಶ್ ಶೆಟ್ಟಿ ಉಜಂತೋಡಿ ಬೆಂಗಳೂರು ಅವರು ಶ್ರೀ ಮಂದಿರದ ಸಮಾಜಮುಖೀ ಚಟುವಟಿಕೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ, ನಿರ್ಮಾಣ ಹಂತದಲ್ಲಿರುವ ನೂತನ ಭೋಜನಶಾಲೆ ಹಾಗೂ ಸಭಾ ಭವನಕ್ಕೆ ರೂಪಾಯಿ 100000.00 (ಒಂದು ಲಕ್ಷ ರೂಪಾಯಿ)ಯನ್ನು ನೀಡಿದರು.

ಈ ಸಂದರ್ಭದಲ್ಲಿ ಬಾಬು ಮಣಿಯಾಣಿ ಜಯನಗರ, ಜನಾರ್ದನ ಮಣಿಯಾಣಿ ಬೆದ್ರುಕೂಡ್ಲು, ಸುಧಾಮ ಪದ್ಮಾರ್, ಗಿರೀಶ್ ಪಿ ಕೆ, ಶ್ರೀಧರ ಪದ್ಮಾರ್, ಹರ್ಷಿತ್ ಎ ಎಸ್, ಶಿವರಾಮ ಪದ್ಮಾರ್, ಪ್ರಶಾಂತ್ ಕುಮಾರ್ ಬಿ ಜಿ, ಚಂದ್ರ ಪದ್ಮಾರ್, ಕೃಷ್ಣ ಪ್ರಸಾದ್ ಬೆದ್ರುಕೂಡ್ಲು, ರತ್ನಾಕರ ಕಲ್ಲಕಟ್ಟ, ಕೃಷ್ಣ ಕಡಾರು, ಚಿತ್ರಾ ಸುರೇಶ್ ಅಗಲ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ವಿವೇಕಾನಂದ ಕಾಲೇಜಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸಂವಾದ

Upayuktha

ಗೃಹರಕ್ಷಕರ ಸೇವೆ ಶ್ಲಾಘನೀಯ: ಸಂತೋಷ್ ಪಾಟೀಲ್

Upayuktha

ನನ್ನ ಮೆಚ್ಚಿನ ಪುಸ್ತಕ: ವಿದ್ಯಾರ್ಥಿಗಳ ಅಭಿಪ್ರಾಯ ಮಂಡನೆ

Upayuktha