ಗ್ರಾಮಾಂತರ ಶಿಕ್ಷಣ- ಉದ್ಯೋಗ ಸ್ಥಳೀಯ

ಸಿ.ಎ. ಫೈನಲ್ ಪರೀಕ್ಷಾ ಫಲಿತಾಂಶ: ಆಳ್ವಾಸ್ ಕಾಲೇಜಿನ 4 ವಿದ್ಯಾರ್ಥಿಗಳ ವಿಶೇಷ ಸಾಧನೆ

ಮೂಡುಬಿದಿರೆ: ನವಂಬರ್ 2019 ರಲ್ಲಿ ನಡೆದ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ 4 ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿಶೇಷ ಸಾಧನೆ ಮೆರೆದಿದ್ದಾರೆ.

ಕಾಲೇಜಿನ ಬಿ.ಕಾಂ. ಪದವಿಯ 2017ನೇ ಬ್ಯಾಚ್‍ನ ವಿದ್ಯಾರ್ಥಿ ವಿಕಾಸ್ ಐ. ಅಂಚನ್ ದೇಶದಲ್ಲಿ 6ನೇ ರ‍್ಯಾಂಕ್‌ನೊಂದಿಗೆ ಉತ್ತೀರ್ಣರಾಗಿ ಕಾಲೇಜಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಇವರು ಸಿ.ಎ. ಫೈನಲ್‍ನ ಗ್ರೂಪ್-1 ಮತ್ತು ಗ್ರೂಪ್-2 ಪರೀಕ್ಷೆಯನ್ನು ಒಮ್ಮೆಗೆ ಎದುರಿಸಿ, ಉತ್ತೀರ್ಣರಾಗಿ ಅನನ್ಯ ಸಾಧನೆ ಮಾಡಿರುತ್ತಾರೆ. 2014 ರಲ್ಲಿ ಸಿ.ಎ.-ಸಿಪಿಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದ ಹೆಗ್ಗಳಿಕೆ ಇವರಿಗಿದೆ.

ಅಲ್ಲದೆ 2016ರಲ್ಲಿ ಸಿ.ಎ.-ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾಗಿರುತ್ತಾರೆ. ಇವರು ತಮ್ಮ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಆಳ್ವಾಸ್ ಕಾಲೇಜಿನಲ್ಲಿ ಉಚಿತ ಶಿಕ್ಷಣ ವ್ಯವಸ್ಥೆಯಲ್ಲಿ ಪೂರೈಸಿರುತ್ತಾರೆ. ಪ್ರಸ್ತುತ ಬೆಂಗಳೂರಿನ ಸತೀಶ್ ಎಸ್. ಬಿರಾದರ್ & ಕೊ.ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಳ್ವಾಸ ಕಾಲೇಜು, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ ಅಕೌಟೆಂಟ್ ಆಫ್ ಇಂಡಿಯದಿಂದ ಅಧಿಕೃತವಾಗಿ ತರಬೇತಿ ನೀಡಲು ಮಾನ್ಯತೆ ಪಡೆದ ಭಾರತದ 8 ಕಾಲೇಜುಗಳಲ್ಲಿ ಒಂದಾಗಿದೆ.

ಆಳ್ವಾಸ್ ಕಾಲೇಜಿನ ಬಿ.ಕಾಂ. ಹಳೆ ವಿದ್ಯಾರ್ಥಿಗಳಾದ ಸುಕೇಶ್ ಕಶ್ಯಪ್ ವೈ., ಗಣಪತಿ ಹೆಗ್ಡೆ, ಶುಭಾ ಹೆಗ್ಡೆ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾದ ಉಳಿದ ಮೂವರು ವಿದ್ಯಾರ್ಥಿಗಳಾಗಿದ್ದಾರೆ.

ಸುಕೇಶ್ ಕಶ್ಯಪ್ ವೈ., ಗ್ರೂಪ್-1 ಮತ್ತು ಗ್ರೂಪ್-2 ವಿಭಾಗದಲ್ಲಿ ಒಂದೇ ಬಾರಿ ಉತ್ತೀರ್ಣರಾಗಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಗಣಪತಿ ಹೆಗ್ಡೆ, ಶುಭಾ ಹೆಗ್ಡೆ ಸಿ.ಎ. ಫೈನಲ್ ಪರೀಕ್ಷೆಯ ಗ್ರೂಪ್-2 ವಿಭಾಗದಲ್ಲಿ ಉತ್ತೀರ್ಣರಾಗಿ ಸಿ.ಎ. ಆಗಿರುತ್ತಾರೆ.

ಸಿ.ಎ. – ಇಂಟರ್ ಮೀಡಿಯಟ್ ಪರೀಕ್ಷಾ ಫಲಿತಾಂಶ
ನವಂಬರ್ 2019 ರಲ್ಲಿ ನಡೆದ ‘ಸಿ.ಎ. – ಇಂಟರ್ ಮೀಡಿಯಟ್’ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜು ಗ್ರೂಪ್-1 ವಿಭಾಗದಲ್ಲಿ 70% ಫಲಿತಾಂಶವನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳಾದ ಕೌಶಿಕ್ ಬಿ., ಮಧುರಾ ಹೆಗ್ಡೆ, ಪ್ರಜ್ವಲ್ ಬಿ. ಶೆಟ್ಟಿ, ಪೂಜಾ ಎ. ಬೆಡಗೆ, ಸ್ವಾತಿ ಕಿಣಿ, ನಿಶಾ ಎಸ್. ಶೆಟ್ಟಿ, ನವೀನ್ ಪೈ ಇವರು ಗ್ರೂಪ್-1 ವಿಭಾಗದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಗ್ರೂಪ್-2 ವಿಭಾಗದಲ್ಲಿ 60% ಫಲಿತಾಂಶವನ್ನು ಪಡೆದುಕೊಂಡಿದ್ದು, ವಿದ್ಯಾರ್ಥಿಗಳಾದ ಪೃಥ್ವಿ ಎಲ್. ಜಿ., ಸಚಿನ್ ಸತ್ಯನಾರಾಯಣ ಶೇಠ್, ದಿಶಾ ಪೈ, ಅಶ್ವಿತಾ ಎಸ್. ಶೆಟ್ಟಿ, ನವ್ಯಶ್ರೀ ಬಿ., ರೊವಿಟಾ ಎಂ. ಪಿ., ಗ್ರೂಪ್-2 ವಿಭಾಗದಲ್ಲಿ ಉತ್ತೀರ್ಣರಾಗಿ ಉತ್ತಮ ಫಲಿತಾಂಶ ಹೊಂದಿದ್ದಾರೆ.

ಸಿ.ಎ. – ಫೌಂಡೇಶನ್ ಪರೀಕ್ಷಾ ಫಲಿತಾಂಶ
ನವಂಬರ್ 2019 ರಲ್ಲಿ ನಡೆದ ಸಿ.ಎ. – ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ನ ವಿದ್ಯಾರ್ಥಿಗಳಾದ ಶರಣ್ ಕುಮಾರ್ ಎಂ. ಎಸ್., ಆತ್ಮೀಯ ಎಂ.ಪಿ., ಭಾವನಾ ಬಿ. ಅಂಬೇಕರ್, ಶ್ರೇಯಾ ಎಸ್. ಶೆಟ್ಟಿ, ಕಿಶೋರ್ ಎನ್. ಬರದ್ವಾಡ್, ಸಫ್ವಾನ್ ಸಲೀಮ್, ಪೂಜಾರಿ ಶಬರಿ ಸದಾನಂದ, ಪುಷ್ಪಲತಾ ಕೆ., ಚೇತನ್ ಎಮ್. ಪೂಜಾರಿ, ಇವರು ಉತ್ತೀರ್ಣರಾಗಿ ಉತ್ತಮ ಫಲಿತಾಂಶ ಹೊಂದಿದ್ದಾರೆ. ನವಂಬರ್ 2019 ರಲ್ಲಿ ನಡೆದ ಸಿ.ಎ. – ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ 43% ಫಲಿತಾಂಶವನ್ನು ಪಡೆದುಕೊಂಡಿದೆ.

ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷರಾದ ಡಾ. ಎಮ್. ಮೋಹನ್ ಆಳ್ವಾ ಮತ್ತು ಪ್ರಾಂಶುಪಾಲರಾದ ಡಾ. ಕುರಿಯನ್, ಸಿ.ಎ. ಸಂಯೋಜಕರಾದ ಅಪರ್ಣಾ, ಅನಂತಶನಯ ಅಭಿನಂದಿಸಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ದ.ಕ ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಅಪಘಾತ: ಅಪಾಯದಿಂದ ಪಾರು

Upayuktha

ಸರಕಾರಿ ಶಾಲೆಗಳ ಅಭಿವೃದ್ಧಿಗೆ ತಂಡವಾಗಿ ಶ್ರಮಿಸೋಣ: ಕಾಶಿಪಟ್ಣ ಗ್ರಾ.ಪಂ.ಉಪಾಧ್ಯಕ್ಷ ಸತೀಶ್

Sushmitha Jain

ಇಕೊಕ್ಸೆನಿತ್ 2020: ವಿವೇಕಾನಂದ ಕಾಲೇಜಿಗೆ ಸಮಗ್ರ ಪ್ರಶಸ್ತಿ

Upayuktha