ಮೂಡುಬಿದಿರೆ: ಶಿಸ್ತಿನ ವಾತಾವರಣ ಕಠಿಣ ಸನ್ನಿವೇಶವೆಂದು ಭಾವಿಸದೆ, ಅದು ನಮ್ಮ ಭವಿಷ್ಯವನ್ನು ಸತ್ಪಥದಲ್ಲಿ ಕೊಂಡೊಯ್ಯಲು ಇರುವ ಉತ್ತಮ ಮಾರ್ಗವೆಂದು ತಿಳಿಯಿರಿ ಎಂದು ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು.
ಫೈವ್ ಕರ್ನಾಟಕ ಎನ್ಸಿಸಿ ನೇವಲ್ ಯುನಿಟ್ ಮಂಗಳೂರು ಹಾಗೂ ಆಳ್ವಾಸ್ ಕಾಲೇಜಿನ ಎನ್ಸಿಸಿ ನೇವಲ್ ವಿಂಗ್ನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಐದು ದಿನದ ಕೆಡೆಟ್ ಕ್ಯಾಂಪ್ನ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಾವಧಾನ್ ಎನ್ನುವ ಪೇರೆಡ್ ಕಾಷನ್ ಅಲ್ಪಕಾಲಿಕವಾಗಿರಬಾರದು. ಅದು ದೀರ್ಘ ಕಾಲದವರೆಗೆ ನಮ್ಮ ಮನದಲ್ಲಿರಬೇಕು. ಜೀವನದಲ್ಲಿ ಯಾವುದನ್ನು ಕಡೆಗಣಿಸದೆ, ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಮಾತನಾಡಿ ವಿದ್ಯಾರ್ಥಿಗಳು ನಮ್ಮ ದೇಶದ ಆಸ್ತಿ ನಿಮ್ಮ ವಿಚಾರಗಳನ್ನು ಇನ್ನು ಎತ್ತರಕ್ಕೆ ಬೆಳೆಸಿಕೊಳ್ಳುವಂತರಾಗಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ಸಿಸಿ ನೇವಲ್ ವಿಂಗ್ನ ವಾರ್ಷಿಕ ನಿಯತಕಾಲಿಕೆ “ನಾವಿಕ 2020” ಬಿಡುಗಡೆ ಮಾಡಲಾಯಿತು. ಎನ್ಸಿಸಿ ನೇವಲ್ ವಿಂಗ್ನಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದ ಕೆಡೆಟ್ ಕೀರ್ತನಾ ಕೆ ಶೆಟ್ಟಿಗೆ ‘ಕೆಡೆಟ್ ಕ್ಯಾಪ್ಟನ್’ ಆಗಿ ಬಡ್ತಿಯನ್ನು, ಕೆಡೆಟ್ ಶರಣ್ಯ ಎಂ ನಾರಾಯಣ್ ಮತ್ತು ವರುಣ್ ಜಿ ಶೆಟ್ಟಿರವರಿಗೆ ‘ಪೆಟ್ಟಿ ಆಫೀಸರ್’ ಆಗಿ ಬಡ್ತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ನೌಕಾಪಡೆ ಅಧಿಕಾರಿಗಳಾದ ಸಿ.ಐ ಮನೋಜ್ ಚೈತ್ರಿ ಹಾಗೂ ರಾಹುಲ್ ಪವಾರ್ ಕಾಲೇಜಿನ ಎನ್ಸಿಸಿ ನೇವಲ್ ವಿಂಗ್ನ ಅಧಿಕಾರಿ ಸಬ್ ಎಲ್ಟಿ ನಾಗರಾಜ್ ಎಂ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಧಾ ನಿರೂಪಿಸಿ, ಚಂದನಾ ಸ್ವಾಗತಿಸಿ, ವಿಜೇತ್ ಶೆಟ್ಟಿ ವಂದಿಸಿದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ