ಜಿಲ್ಲಾ ಸುದ್ದಿಗಳು

ಯುವ ಜನತೆಯ ಭವಿಷ್ಯಕ್ಕೆ ಮಾರಕವಾದ ಡ್ರಗ್ಸ್ ವಿರುದ್ಧ ಶುರುವಾಗಿದೆ ಸಮರ

ಮಡಿಕೇರಿ ತಾಲೂಕು ಗ್ರಾಮಂತರ ಬಿಜೆಪಿ ಯುವ ಮೋರ್ಚಾದ ವತಿಯಿಂದ ಡ್ರಗ್ಸ್ ಮುಕ್ತ ಭಾರತ ಅಭಿಯಾನ

ಮಡಿಕೇರಿ: ಯುವಜನತೆಯ ಭವಿಷ್ಯಕ್ಕೆ ಮಾರಕವಾದ ಡ್ರಗ್ಸ್ ವಿರುದ್ಧ ಜನತೆಗೆ ಅರಿವು ಮೂಡಿಸುವ ಆಂದೋಲನವು ಆರಂಭಗೊಂಡಿದೆ.
ಭಾರತೀಯ ಜನತಾ ಪಾರ್ಟಿ ಮಡಿಕೇರಿ ತಾಲೂಕು ಗ್ರಾಮಾಂತರ ಯುವ ಮೋರ್ಚದ ವತಿಯಿಂದ ವ್ಯಸನ ಮುಕ್ತ – ಸ್ವಚ್ಛ ಪರಿಸರಯುಕ್ತ ಸಮಾಜ ನಿರ್ಮಾಣಕ್ಕಾಗಿ ಡ್ರಗ್ಸ್ ಮುಕ್ತ ಭಾರತ ಕಾರ್ಯಕ್ರಮ ಪೆರಾಜೆ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ನಡೆಯಿತು.

ಈಗಿನ ಯುವ ಪೀಳಿಗೆ ಹಾಗು ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಮಾದಕ ವ್ಯಸನಕ್ಕೆ ಬಲಿಯಾಗುವುದರ ಕುರಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ಹೇಮಂತ್ ತೋರೆರ ವಿವರವಾಗಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಬಿಜೆಪಿ ಮಡಿಕೇರಿ ಯುವ ಮೋರ್ಚಾದ ವತಿಯಿಂದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನರಿಗೆ ಡ್ರಗ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗು ಮನೆ ಮನೆಗೆ ಕರ ಪತ್ರ ಹಂಚಿ ಜಾಗೃತಿ ಮೂಡಿಸಿ ಡ್ರಗ್ಸ್ ಮುಕ್ತ ಭಾರತ ಮಾಡಲು ಪಣತೊಡುತ್ತೆವೆ ಎಂದು ತಿಳಿಸಿದರು.

ಡ್ರಗ್ಸ್ ಬಗ್ಗೆ ಹಾಗು ಅದರಿಂದಾಗಿ ಅಗುವ ಅನಾಹುತ, ಮಾನಸಿಕ ಸಮಸ್ಯೆಗಳ ಬಗ್ಗೆ ಕೆವಿಜಿ ಮೆಡಿಕಲ್ ಕಾಲೆಜಿನ ಮನೋವೈದ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಪೂನಂ ಮೊಂಟಡ್ಕ ಅವರು ಮಾತನಾಡಿದರು. ಜೊತೆಗೆ ಇಂತಹ ಮಾದಕ ಲೋಕದಿಂದ ಹೇಗೆ‌ ಹೊರಬರಬಹುದು ಮತ್ತು ಮಾದಕ ವ್ಯಸನಿಗಳನ್ನು ಗುಣ ಮುಖರಾಗಲು ಇರುವ ವೈದ್ಯಕೀಯ ಸೇವೆಗಳ ಕುರಿತು ತಿಳಿಸಿದರು. ಬಳಿಕ ಸಾರ್ವಜನಿಕರ ಪ್ರಶ್ನೆಗಳಿಗೂ ಉತ್ತರಿಸಿದರು.

ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ದರ್ಶನ್ ಜೊಯಪ್ಪನವರು ಭಾರತದ ಯುವ ಜನರ ಮೇಲೆ ಡ್ರಗ್ಸ್ ಕೆಟ್ಟ ಪ್ರಭಾವ ಬೀರಿದೆ ಮತ್ತು ಬಿಜೆಪಿ ಸರ್ಕಾರವು ಡ್ರಗ್ಸ್ ವಿರುದ್ದ ಸಮರ ಸಾರಿದೆ ಎಂದರು. ಮುಂದಿನ ದಿನಗಳ ಡ್ರಗ್ಸ್ ಬಗ್ಗೆ ಸರಕಾರ ಕೈಗೊಳ್ಳಲಿರುವ ಕ್ರಮಗಳ ಬಗ್ಗೆಯೂ ವಿವರಿಸಿದರು.

ಪೆರಾಜೆ ಗ್ರಾಮದ ಹಿರಿಯರು ಜಿಲ್ಲಾ ಕೃಷಿ ಮೋರ್ಚಾದ ಅಧ್ಯಕ್ಷರು ತಾಲೂಕು ಪಂಚಾಯತಿ ಸದಸ್ಯರಾದ ನಾಗೇಶ್ ಕುಂದಲ್ಪಡಿಯವರು ಯುವಕರು ಹೇಗೆ ಹಾದಿ ತಪ್ಪಿದ್ದಾರೆ ಹೇಗೆ ಯುವಕರನ್ನು ದೇಶದ ಸದೃಢ ಪ್ರಜೆಯಾಗಿ ರೂಪಿಸಬಹುದು, ಮುಂದಿನ ದಿನಗಳಲ್ಲಿ ಯುವ ಮೋರ್ಚಾದ ಸದಸ್ಯರು ಸಾರ್ವಜನಿಕವಾಗಿ ಹೇಗೆ ಬೆರೆಯಬೇಕು ಹಾಗು ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಅನ್ಯ ಪಕ್ಷದಿಂದ ಪೆರಾಜೆ ಗ್ರಾಮದ ಶ್ರೀಧರ್ ಕುಂಡಾಡು, ಕುಞ್ಞಣ್ಣ ನಾಯಕ ಕರಿಭೂತನ ಕೋಡಿ, ಜಗದೀಶ್ ಕುಂಬಳಚೇರಿ ಅವರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪೆರಾಜೆ ಶಕ್ತಿ ಕೇಂದ್ರದ ಪ್ರಮುಖ್ ನಂಜಪ್ಪ ನಿಡ್ಯಮಲೆ , ಸಹಪ್ರಮುಖ್ ಚಿಣ್ಣಪ್ಪ ಅಡ್ಕ, ತಾಲೂಕು ಭಾಜಪ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ್ಲ, ಮಾಜಿ ಪೆರಾಜೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೊನ್ನಪ್ಪ ಅಮ್ಮೆಚೂರು, ವಿಎಸ್ಎಸ್ಎನ್ ನಿರ್ದೇಶಕರಾದ ಪ್ರಮೀಳ ಭಾರದ್ವಜ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕಿನ ಬಾಜಪ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಮೂಲೆಮಜಲು ಸ್ವಾಗತಿಸಿದರೆ, ಉದಯ ಕುಂಬಳಚೇರಿ ವಂದಿಸಿದರು, ಕಾರ್ಯಕ್ರಮ ನಿರ್ವಹಣೆಯನ್ನು ಕಿರಣ್ ಕುಂಬಳಚೇರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಪವನ್ ತೋಟಂಬೈಲ್, ಪದಾಧಿಕಾರಿಗಳಾದ ಅಕ್ಷಿತ್ ಉಳುವಾರನ, ವಿನೋದ್ ಚೆದುಕಾರು, ಗಯಾನಂದ್ ಉಳುವಾರನ, ಜೀವನ್ ಬೆಳ್ಳಿಯಪ್ಪ ಮಞಂಡ್ರ, ಚೇತನ್ ಕೂಡಕಂಡಿ, ಖಜಾಂಚಿಗಳಾದ ಪ್ರವೀಣ್ ಮಜಿಕೋಡಿ, ಪುನಿತ್ ಕೊಂಪುಳಿರ, ಬಿಜೆಪಿಯ ಹಿರಿಯರು , ಕಾರ್ಯಕರ್ತರು, ಪೆರಾಜೆ ಗ್ರಾಮಸ್ಥರು ಹಾಜರಿದ್ದರು.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಾಸರಗೋಡು: ಸಿರಿಚಂದನ ಯಕ್ಷಗಾನ ತರಬೇತಿ ಶಿಬಿರ ಸಂಪನ್ನ

Upayuktha

ಲಾರಿ ಮತ್ತು ಕಾರು ಅಪಘಾತ; ನವ ವಧು ಸಾವು

Harshitha Harish

ಜನಾನುರಾಗಿ ವೈದ್ಯರಾದ ಡಾ.ವೇಣುಗೋಪಾಲ ಶರ್ಮರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗರಿ

Upayuktha