ಅಪಘಾತ- ದುರಂತ ಸ್ಥಳೀಯ

ಭಕ್ತಕೋಡಿ ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಗಾಯಗೊಂಡ ವ್ಯಕ್ತಿ ಸಾವು

ಸವಣೂರು: ಪುತ್ತೂರು ತಾಲೂಕಿನ ಕಾಣಿಯೂರು ರಸ್ತೆಯ ಭಕ್ತಕೋಡಿ ಎಂಬಲ್ಲಿ ಕಾರುಗಳ ಮಧ್ಯೆ ಅ.25ರಂದು ಅಪಘಾತ ಸಂಭವಿಸಿ ತೀವ್ರ ಗಾಯಗೊಂಡ ಓಮ್ನಿ ಚಾಲಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

ಹಾಗೆಯೇ ಮೃತರಾದ ಓಮ್ನಿ ಚಾಲಕನನ್ನು ಬೆಳ್ಳಾರೆ ಸಮೀಪ ದ ಪಡ್ಪಿನಂಗಡಿಯ ಅಬ್ದುಲ್ ರಹಿಮಾನ್ ಎಂದು ಪತ್ತೆ ಹಚ್ಚಲಾಗಿದೆ.

ಪುತ್ತೂರು ಕಡೆಯಿಂದ ಸವಣೂರು ಕಡೆಗೆ ಚಲಾಯಿಸುತ್ತಿದ್ದ ಓಮ್ನಿ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಓಮ್ನಿ ಮತ್ತು ಸ್ವಿಫ್ಟ್ ಎರಡೂ ಕಾರು ನಜ್ಜುಗುಜ್ಜಾಗಿತ್ತು.

ಢಿಕ್ಕಿಯ ರಭಸಕ್ಕೆ ಓಮ್ನಿ ಚಾಲಕ ಅಬ್ದುಲ್ ರಹಿಮಾನ್ ಎಂಬವರ ಎರಡು ಕಾಲಿಗೆ ಗಂಭೀರ ಗಾಯವಾಗಿತ್ತು. ಹಾಗೆಯೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.

Related posts

ಕಾರಂತರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಭಾವಿಸಿದ ಪರಿ ಭಿನ್ನ: ಡಾ. ಆಳ್ವ

Upayuktha

ಫೆ .6ರಿಂದ 12ರ ತನಕ ಗೋಸಾಡ ಶ್ರೀ ಮಹಿಷರ್ಮನಿ ದೇವಸ್ಥಾನದ ಬ್ರಹ್ಮಕಲಶೋತ್ಸವ

Upayuktha

ಸಂವಿಧಾನವನ್ನು ಅರಿಯುವುದೇ ಸಂವಿಧಾನ ದಿನದ ಉದ್ದೇಶ: ಶಾಸಕ ಡಾ. ಭರತ್ ಶೆಟ್ಟಿ

Upayuktha

Leave a Comment