ದೇಶ-ವಿದೇಶ ಪ್ರಮುಖ

ಅಂಕೋಲ ಬಳಿ ಕಾರು ಅಪಘಾತ: ಕೇಂದ್ರ ಆಯುಷ್‌ ಸಚಿವ ಶ್ರೀಪಾದ ನಾಯಕ್‌ಗೆ ಗಂಭೀರ ಗಾಯ, ಸಚಿವರ ಪತ್ನಿ ಸಹಿತ ಇಬ್ಬರು ಮೃತ್ಯು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಬಳಿ ಇಂದು ಸಂಭವಿಸಿದ ಕಾರು ಅಪಘಾತದಲ್ಲಿ ಕೇಂದ್ರ ಆಯುಷ್‌ ಖಾತೆ ಸಚಿವ ಶ್ರೀಪಾದ ನಾಯಕ್ ಅವರ ಪತ್ನಿ ವಿಜಯಾ ಹಾಗೂ ಸಚಿವ ಆಪ್ತ ಕಾರ್ಯದರ್ಶಿ ದೀಪಕ್‌ ರಾಮದಾದ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸಚಿವರ ಸಹಿತ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಯಲ್ಲಾಪುರ ಮಾರ್ಗವಾಗಿ ಗೋಕರ್ಣಕ್ಕೆ ತೆರಳುತ್ತಿದ್ದಾಗ ಹೊಸಕಂಬಿ ಘಾಟ್‌ ಬಳಿ ಹಿಲ್ಲೂರಿನಲ್ಲಿ ಸಚಿವರ ಕಾರು ಅಪಘಾತಕ್ಕೀಡಾಗಿದೆ. ಜನವರಿ 9ರಂದು ಸಚಿವರು ದಂಪತಿ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಕೆಲವು ಪುಣ್ಯಕ್ಷೇತ್ರಗಳ ದರ್ಶನ ಕೈಗೊಂಡಿದ್ದರು.

ಗಾಯಗೊಂಡವರನ್ನು ಅಂಕೋಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೋಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ಇದೀಗ ಸಿಗ್ನಲ್ Appನಲ್ಲಿ… ಗ್ರೂಪ್‌ಗೆ ಸೇರಲು ಮೊದಲು ಸಿಗ್ನಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಲಿಂಕ್ ಕ್ಲಿಕ್ ಮಾಡಿ.

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ರಾಷ್ಟ್ರ ಮಟ್ಟದ ಫುಟ್‍ಬಾಲ್ ಪಂದ್ಯಾಟ: ಸಂತ ಫಿಲೋಮಿನಾ ಕಾಲೇಜಿಗೆ ಚಾಂಪಿಯನ್ ಪಟ್ಟ

Upayuktha

ದೇಶದ ಜನತೆಯನ್ನುದ್ದೇಶಿಸಿ ಡಿ.27 ರಂದು ಮೋದಿ ಭಾಷಣ

Harshitha Harish

‘ಸಬೂಬು ನೀಡಿ ತಪ್ಪಿಸಲು ಅಸಾಧ್ಯ, ಕೆಲಸ ಮಾಡಿ ಜನರ ಮನಗೆಲ್ಲುವುದೊಂದೇ ಆಯ್ಕೆ’

Upayuktha