ಅಪಘಾತ- ದುರಂತ ಗ್ರಾಮಾಂತರ ಸ್ಥಳೀಯ

ಕುಂಬಳೆ: ನಾಯ್ಕಾಪು ಬಳಿ ಕಾರು ಮಗುಚಿ ಇಬ್ಬರ ಸಾವು

ಕುಂಬಳೆ: ಕುಂಬಳೆ ಸೀತಾಂಗೋಳಿ ನಡುವೆ ನಾಯ್ಕಾಪು ಸಮೀಪದ ಲಿಟಲ್‌ ಲಿಲ್ಲಿ ಶಾಲೆಯ ಬಳಿ ಇಂದು ಸಂಜೆ ಕಾರೊಂದು ಮಗುಚಿ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟವರನ್ನು ಕಾಸರಗೋಡು ತಳಂಗರೆಯ ನಿವಾಸಿ ಮಿಟ್ಟೂ (18), ಕುಂಬಳೆ ಬದ್ರಿಯಾ ನಗರದ ಅಬ್ದುಲ್ ಸಾಲಿ- ಹಸೀನಾ ದಂಪತಿಗಳ ಪುತ್ರ ಹುಸೈನ್ (17) ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವಕ ಮುಹಮ್ಮದ್ ಸುಹೈಲ್‌ನನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಒಬ್ಬ ವ್ಯಕ್ತಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ಮಹಾಬಲೇಶ್ವರ ಕೆ. ಅವರಿಗೆ ಪಿಎಚ್.ಡಿ

Upayuktha

ಉಡುಪಿಯಲ್ಲಿ ಸ್ವರ್ಣಾರತಿ ಅಪೂರ್ವ ಕಾರ್ಯಕ್ರಮ; ಸ್ವರ್ಣೆಗೆ ಆರತಿ ಬೆಳಗಿದ ಪೇಜಾವರ ಶ್ರೀಗಳು

Upayuktha

ಉದ್ಯೋಗ: ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಒಟ್ಟು 52 ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

Upayuktha