ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾರ್ಚ್‌ 5 ರಂದು ಕೆರಿಯರ್‌ ಡೇ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ವವಿದ್ಯಾಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಬ್ಯೂರೋ (ಯುಇಐಜಿಬಿ) ಮಾರ್ಚ್‌ 5 (ಶುಕ್ರವಾರ) ರಂದು ಮಂಗಳಾ ಕ್ರೀಡಾಂಗಣದಲ್ಲಿ ಕೆರಿಯರ್‌ ಡೇ ಕಾರ್ಯಕ್ರಮ ಆಯೋಜಿಸಿದೆ.

ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯ ಡಾ. ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌ ಬೆಳಗ್ಗೆ 9.45ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕ್ಯಾರಿಯರ್‌ ಡೇ ಯ ಭಾಗವಾಗಿ ಬಂಟ್ವಾಳ ತಹಶೀಲ್ದಾರ್‌ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ರಶ್ಮಿ ಎಸ್‌ ಆರ್‌ (ಕೆಎಎಸ್‌), ಐಡಿಪಿ ಎಜುಕೇಶನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಹಿರಿಯ ಕಾರ್ಯನಿರ್ವಾಹಕ ಶಿಜೋಮೊನ್‌ ಯೇಸುದಾಸ್‌, ಯುಇಐಜಿಬಿ ಉಪ ಮುಖ್ಯಸ್ಥ ಹೇಮಚಂದ್ರ ಎಸ್‌ ಜೆ, ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿʼಸೋಜ ಅವರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ (ಆಡಳಿತ) ಕೆ ರಾಜು ಮೊಗವೀರ, ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಶ್ಲಾಘ್ಯ’ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಹೊಸ ಬ್ಯಾಚ್ ಫೆ.20ರಿಂದ ಆರಂಭ

Upayuktha

ಕಾಸರಗೋಡು ಜಿಲ್ಲಾ ಯುವಜನ ಪಾರ್ಲಿಮೆಂಟ್‌ ಸ್ಪರ್ಧೆ: ಹಿಂದಿ ಭಾಷಣ ಸ್ಪರ್ಧೆಯಲ್ಲಿ ಶರ್ವಾಣಿ ಕೆ ರಾಜ್ಯಮಟ್ಟಕ್ಕೆ ಆಯ್ಕೆ

Upayuktha

ಮಾರಣಕಟ್ಟೆ ಜಾತ್ರೆ: ಈ ಬಾರಿ ಜ. 15ರಿಂದ 17ರ ವರೆಗೆ

Upayuktha