ಘಾಜಿಯಾಬಾದ್: ಕೇಂದ್ರೀಯ ತನಿಖಾ ದಳ ದವರು (ಜ.14) ರಂದು ತನ್ನದೇ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದೆ.
ಭ್ರಷ್ಟಾಚಾರದ ಆರೋಪದ ಕಾರಣ ಘಾಜಿಯಾಬಾದ್ ನಲ್ಲಿರುವ ತನ್ನ ಇಲಾಖೆಯ ಅಧಿಕಾರಿಗಳ ನಿವಾಸ ಹಾಗೂ ಅಧಿಕಾರಿಗಳಿಗೆ ಸಂಬಂಧಪಟ್ಟ ಜಾಗಗಳಲ್ಲಿ ತಪಾಸಣೆ ನಡೆಸಿದೆ.
ಈ ದಾಳಿ ಗೆ ಸಂಬಂಧಪಟ್ಟ ಬೆಳವಣಿಗೆಗಳ ಬಗ್ಗೆ ಸಿಬಿಐ ಈ ವರೆಗೂ ಯಾವುದೇ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ. ಘಾಜಿಯಾಬಾದ್ ನ ಶಿವಾಲಿಕ್ ಅಪಾರ್ಟ್ಮೆಂಟ್ಸ್ ನಲ್ಲಿ 2-3 ಮಂದಿ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಭ್ರಷ್ಟಾಚಾರದ ಆರೋಪದ ಅಡಿಯಲ್ಲಿ ರೈಡ್ ಮಾಡಲಾಗಿರುವ ಅಧಿಕಾರಿಗಳ ಹೆಸರುಗಳನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿಲ್ಲ. ಆದರೆ ಓರ್ವ ಡಿವೈ.ಎಸ್ ಪಿ ಶ್ರೇಣಿಯ ಅಧಿಕಾರಿ ಮನೆ ಮೇಲೆ ದಾಳಿಯಾಗಿದೆ ಎಂದು ಐಎಎನ್ಎಸ್ ವರದಿ ಮೂಲಕ ತಿಳಿದುಬಂದಿದೆ.