ದೇಶ-ವಿದೇಶ ಶಿಕ್ಷಣ

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಜೂನ್ 20ಕ್ಕೆ ಪ್ರಕಟ: ಮೌಲ್ಯಮಾಪನ ಮಾರ್ಗಸೂಚಿ ಬಿಡುಗಡೆ

ಹೊಸದಿಲ್ಲಿ: ಸಿಬಿಎಸ್‌ಎ 10ನೇ ತರಗತಿಯ ಫಲಿತಾಂಶವನ್ನು ಜೂನ್ 20ರಂದು ಪ್ರಕಟಿಸಲಾಗುವುದು ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ತಿಳಿಸಿದೆ.

ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯನ್ನು ಸಿಬಿಎಸ್‌ಎ ಪ್ರಕಟಿಸಿದ್ದು, ಈ ಕುರಿತು ಶಾಲೆಗಳಿಗೆ ಇ-ಮೇಲ್ ಕಳುಹಿಸಿದೆ. ಜೂನ್ 5ರೊಳಗೆ ಶಾಲೆಗಳು ತಮ್ಮ ವಿದ್ಯಾರ್ಥಿಗಳ ಮೌಲ್ಯಮಾಪನದ ವಿವರಗಳನ್ನು ಸಿಬಿಎಸ್‌ಇಗೆ ಸಲ್ಲಿಸಬೇಕಿದ್ದು, ಅನಂತರ ಅವುಗಳನ್ನಾಧರಿಸಿ ಜೂನ್ 20ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.

ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಿತ್ತು. ಆಂತರಿಕ ಮೌಲ್ಯಮಾಪನಗಳ ಆಧಾರದಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ಹೇಳಿತ್ತು.

ನಿನ್ನೆ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ, ಶಾಲೆಗಳು ಈಗಾಗಲೇ ನಡೆಸಿದ 20 ಅಂಕಗಳ ಆಂತರಿಕ ಮೌಲ್ಯಮಾಪನ ಯಥಾವತ್‌ ಜಾರಿಯಲ್ಲಿರುತ್ತದೆ. ಉಳಿದ 80 ಅಂಕಗಳ ಮೌಲ್ಯಮಾಪನಕ್ಕಾಗಿ ಪ್ರತಿ ಶಾಲೆಯೂ 7 ಸದಸ್ಯರ ಸಮಿತಿ ರಚಿಸುವಂತೆ ಸಿಬಿಎಸ್‌ಇ ಸೂಚಿಸಿದೆ. ಪ್ರಾಂಶುಪಾಲರು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಇಬ್ಬರು ಭಾಷಾ ಶಿಕ್ಷಕರು ಈ ಸಮಿತಿಯ ಸದಸ್ಯರಾಗಿರುತ್ತಾರೆ.

80 ಅಂಕಗಳ ಪೈಕಿ 10 ಅಂಕಗಳನ್ನು ಮಾಸಿಕ ಪರೀಕ್ಷೆಗಳಿಂದ, 30 ಅಂಕಗಳನ್ನು ಅರ್ಧ ವಾರ್ಷಿಕ ಪರೀಕ್ಷೆಯಿಂದ ಮತ್ತು ಉಳಿದ 40 ಅಂಕಗಳನ್ನು ಹಿಂದಿನ ತರಗತಿಗಳ ಸಾಧನೆಗಳಿಂದ ಆಧರಿಸಿ ನಿರ್ಧರಿಸಲಾಗುತ್ತದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಶೇ 5ರಷ್ಟು ತುಟ್ಟಿಭತ್ಯೆ ಹೆಚ್ಚಳ: ಕೇಂದ್ರ ಸರಕಾರಿ ನೌಕರರಿಗೆ ದೀಪಾವಳಿ ಕೊಡುಗೆ

Upayuktha

ಜಮ್ಮು-ಕಾಶ್ಮೀರ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ಭಾರತಕ್ಕೆ ಒಕ್ಕೊರಲ ಬೆಂಬಲ; ಪಾಕ್, ಚೀನಾಗೆ ಸೋಲು

Upayuktha

ಹೊಸ ಮಗ್ಗುಲಿನತ್ತ ಹೊರಳುತ್ತಿರುವ ಶಿಕ್ಷಣ: ಆಸಕ್ತ ವಿದ್ಯಾರ್ಥಿಗಳ ಕೈ ಹಿಡಿದ ತಂತ್ರಜ್ಞಾನ

Upayuktha