ಬೆಂಗಳೂರು: ಇತ್ತೀಚೆಗೆ ಸೆರೆಯಾಗಿದ್ದ ಉತ್ತರಪ್ರದೇಶ ಮೂಲಕ ಇಬ್ಬರು ಕುಖ್ಯಾತ ಅಂತರಾಜ್ಯ ಕಳ್ಳರ ವಿರುದ್ಧ ತನಿಖೆ ಮುಂದುವರೆಸಿದ ಸಿಸಿಬಿ ಪೊಲೀಸರು ಮತ್ತೆ ರೂ.75 ಲಕ್ಷ ಮೌಲ್ಯದ ಒಂದೂವರೆ ಕೆಜಿ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ಫಯೂಮ್ ಅಲಿಯಾಸ್ ಎಟಿಎಂ ಫಯೂಮ್ ಹಾಗೂ ಮುರಸಲೀಂ ಮೊಹಮ್ಮದ್ ಅಲಿಯಾಸ್ ಸಲೀಂ ಬಂಧಿತ ಆರೋಪಿಗಳು.
ಈ ಮೊದಲು ಕೂಡಾ ಆರೋಪಿಗಳಿಂದ ನಾಲ್ಕು ಕೆ.ಜಿ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಯಿತು.
ಆರೋಪಿಗಳ ತವರೂರು ಉತ್ತರಪ್ರದೇಶದ ಚಂದೋಸಿ ಗ್ರಾಮಕ್ಕೆ ತೆಗೆದುಕೊಂಡು ಕದ್ದ ಚಿನ್ನಕ್ಕೆ ಹುಡುಕಾಟ ನಡೆಸಲಾಯಿತು. ಐದು ದಿನಗಳ ಸತತ ಹುಡುಕಾಟದ ಬಳಿಕ ಒಂದೂವರೆ ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.