ವಿಜ್ಞಾನ-ತಂತ್ರಜ್ಞಾನ

ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ಖಗೋಳ ವಿದ್ಯಮಾನಗಳು

ಹುಣ್ಣಿಮೆ : 03 ಆಗಸ್ಟ್ ಉಪಾಕರ್ಮ/ ನೂಲ ಹುಣ್ಣಿಮೆ

ಅಮಾವಾಸ್ಯೆ : 19 ಆಗಸ್ಟ್

02 ಆಗಸ್ಟ್ – ಚಂದ್ರ ಮತ್ತು ಗುರು ಯುತಿ ಹಾಗು ಚಂದ್ರ ಮತ್ತು ಶನಿ ಯುತಿ
ಚಂದ್ರ ಮತ್ತು ಗುರು ಗ್ರಹ ಈ ದಿನ ಬೆಳಗ್ಗಿನ ಜಾವಾ, ಅತಿ ಸಮೀಪದಲ್ಲಿ ಕಾಣಿಸುತ್ತಾರೆ. ಬೆಳಿಗ್ಗೆ 05:02 ರ ಹೊತ್ತಿಗೆ ಚಂದ್ರನು ಗುರು ಗ್ರಹದ ದಕ್ಷಿಣ ದಿಕ್ಕಿನಲ್ಲಿ 1°31′ ಕೋನಾಂತರದಲ್ಲಿ ಹಾದುಹೋಗುತ್ತಾನೆ. ಇದೇ ದಿನ, ಸಂಜೆ ಹೊತ್ತಿಗೆ ಚಂದ್ರ ಮತ್ತು ಶನಿ ಗ್ರಹ ಅತಿ ಸಮೀಪದಲ್ಲಿ ಬಂದು, ಸುಮಾರು 06:40 ಕ್ಕೆ 2°16′ ಕೋನಾಂತರದಲ್ಲಿ ಕಾಣಬಹುದು.

Advertisement
Advertisement

09 ಆಗಸ್ಟ್ – ಚಂದ್ರ ಮತ್ತು ಮಂಗಳ ಯುತಿ
ಚಂದ್ರನನ್ನು ಮಂಗಳ ಗ್ರಹದ ಸಮೀಪ ನೋಡಬಹುದು. ಮಂಗಳದ ದಕ್ಷಿಣ ದಿಕ್ಕಿನಲ್ಲಿ 0°45′ ಗಳಷ್ಟು ಕೋನಾಂತರದಲ್ಲಿ ಚಂದ್ರ ಹಾದುಹೋಗುತ್ತಾನೆ.

11 ಆಗಸ್ಟ್ – ಶುಕ್ರ ಅತಿ ಎತ್ತರದಲ್ಲಿ
ಗರಿಷ್ಟ ಕೋನೋನ್ನತಿಯಿಂದಾಗಿ, ಈ ವರ್ಷದ ಮುಂಜಾನೆಯ ದರ್ಶನದಲ್ಲಿ, ಶುಕ್ರ ಗ್ರಹವು ಈ ದಿನ ಸೂರ್ಯೋದಯದ ಹೊತ್ತಿಗೆ ಆಕಾಶದಲ್ಲಿ ಅತಿ ಎತ್ತರಕ್ಕೆ ತಲುಪುತ್ತದೆ

12 ಆಗಸ್ಟ್ – Perseid (ಪರ್ಸೀಡ್) ಉಲ್ಕಾ ವೃಷ್ಟಿ
ಜುಲೈ 17 ರಿಂದ ಆಗಸ್ಟ್ 24 ರವರೆಗೆ ಪೆರ್ಸಿಡ್ ಉಲ್ಕಾ ವೃಷ್ಟಿ ಗೋಚರಿಸುತ್ತದೆ. ಆಗಸ್ಟ್ 12 ರಂದು, ಪರ್ಸಿಯಸ್ ನಕ್ಷತ್ರಪುಂಜದ ದಿಕ್ಕಿನಲ್ಲಿ, ಗಂಟೆಗೆ 150 ರಷ್ಟು ಉಲ್ಕೆಗಳನ್ನು ಕಾಣಬಹುದು

13 ಆಗಸ್ಟ್ – ಶುಕ್ರ ಗ್ರಹದ ದೀರ್ಘ ಪಶ್ಚಿಮ ಕೋನಾಂತರ
ಪೂರ್ವದಲ್ಲಿ ಕಾಣುವ ಶುಕ್ರ ಗ್ರಹವು, ಈ ದಿನ
ಸೂರ್ಯನಿಂದ 45.8° ಕೋನಾಂತರದೊಂದಿಗೆ, ಈ ವರ್ಷದ ತನ್ನ ಬೆಳಗ್ಗಿನ ದರ್ಶನದ ಅವಧಿಯಲ್ಲಿ ಗರಿಷ್ಟ ಕೋನಾಂತರವನ್ನು ತಲುಪುತ್ತದೆ

15 ಆಗಸ್ಟ್ – ಶುಕ್ರ ಗ್ರಹವನ್ನು ಸಮೀಪಿಸುವ ಚಂದ್ರ
ಸಂಜೆ ಹೊತ್ತು, ಚಂದ್ರ ಮತ್ತು ಶುಕ್ರ ಗ್ರಹ ಸಮೀಪದಲ್ಲಿ ಕಾಣಿಸುತ್ತಾರೆ. ಕನಿಷ್ಠ 3°59′ ಗಳಷ್ಟು ಕೋನಾಂತರ ಇರುತ್ತದೆ.

17 ಆಗಸ್ಟ್ – κ-Cygnid (κ- ಸಿಗ್ನಿಡ್) ಉಲ್ಕಾ ವೃಷ್ಟಿ
3 ರಿಂದ 25ರ ವರೆಗೆ ನಡೆಯಲಿರುವ κ-ಸಿಗ್ನಿಡ್ ಉಲ್ಕಾ ವೃಷ್ಟಿಯಲ್ಲ್ಲಿ, 17 ರಂದು κ-ಸಿಗ್ನಿಡ್ ನಕ್ಷತ್ರದ ದಿಕ್ಕಿನಲ್ಲಿ ಗಂಟೆಗೆ ಗರಿಷ್ಠ 3 ರಷ್ಟು ಉಲ್ಕೆಗಳು ಗೋಚರಿಸುತ್ತವೆ.

17 ಆಗಸ್ಟ್ – ಬುಧ ಮತ್ತು ಸೂರ್ಯ ಉಚ್ಚ ಯುತಿ
ಬುಧ ಗ್ರಹವು ತನ್ನ ಕಕ್ಷೆಯಲ್ಲಿ, ಸೂರ್ಯನ ಹಿಂದೆ ಇದ್ದು, ಈ ದಿನ ಭೂಮಿಯಿಂದ ಕನಿಷ್ಠ ಕೋನಾಂತರದಲ್ಲಿ ಹಾದುಹೋಗುತ್ತದೆ.

29 ಆಗಸ್ಟ್ – ಗುರು ಮತ್ತು ಶನಿಯೊಂದಿಗೆ ಚಂದ್ರ ಮತ್ತೊಮ್ಮೆ ಯುತಿ
ಇದೇ ತಿಂಗಳಲ್ಲಿ ಎರಡನೇ ಬಾರಿ, ಚಂದ್ರನು ಗುರು ಹಾಗೂ ಶನಿ ಗ್ರಹಗಳ ಸಮೀಪ ಹಾದುಹೋಗುತ್ತಾನೆ. ಬೆಳಗ್ಗಿನ ಜಾವಾ, ಗುರು ಗ್ರಹದ ದಕ್ಷಿಣ ದಿಕ್ಕಿನಲ್ಲಿ 1°24′ ಹಾಗೂ ರಾತ್ರಿ ಶನಿ ಗ್ರಹದ ದಕ್ಷಿಣ ದಿಕ್ಕಿನಲ್ಲಿ 2°12′ ಗಳಷ್ಟು ಕನಿಷ್ಠ ಕೋನಾಂತರದಲ್ಲಿ ಕಾಣಬಹುದು.

31 ಆಗಸ್ಟ್ – Aurigid (ಆರಿಜಿಡ್) ಉಲ್ಕಾ ವೃಷ್ಟಿ
ಆಗಸ್ಟ್ 28 ರಿಂದ ಸೆಪ್ಟೆಂಬರ್ 5ರ ವರೆಗೆ ನಡೆಯಲಿರುವ, ಆರಿಜಿಡ್ ಉಲ್ಕಾ ವೃಷ್ಟಿಯಲ್ಲಿ ಆಗಸ್ಟ್ 31 ರಂದು ಆರಿಗ ನಕ್ಷತ್ರಪುಂಜದ ದಿಕ್ಕಿನಲ್ಲಿ, ಗಂಟೆಗೆ ಗರಿಷ್ಠ 6 ರಷ್ಟು ಉಲ್ಕೆಗಳನ್ನು ಕಾಣಬಹುದು.

ಈ ಎಲ್ಲ ವಿದ್ಯಮಾನಗಳನ್ನು ನಿಮಗೆ ವೀಕ್ಷಿಸಲು ಸಾಧ್ಯವಾಗಲಿದೆ ಎಂದು PAAC ನಿರೀಕ್ಷಿಸುತ್ತದೆ.

ಮಾಹಿತಿ: ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಕ್ಲಬ್, ಉಡುಪಿ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Advertisement
Advertisement

Related posts

ಖಗೋಳ ವಿಸ್ಮಯ: ಇಂದು ಖಗ್ರಾಸ ಚಂದ್ರಗ್ರಹಣ ರಾತ್ರಿ 10:37ರಿಂದ 2:30ರ ನಡುವೆ

Upayuktha

ಕೊರೊನಾ ಕಾರ್ಮೋಡದ ನಡುವೆ ಆಗಸದಲ್ಲಿ ಹೊಳೆಯುತ್ತಿದೆ ಬೆಳ್ಳಿ ಚುಕ್ಕಿ…

Upayuktha

ಟ್ಯಾಕ್ ಸೆಕ್ಯುರಿಟಿ ಸೊಲ್ಯೂಷನ್ಸ್ ಸಂಸ್ಥಾಪಕ ತೃಷ್ಣೀತ್ ಅರೋರಾ

Upayuktha
error: Copying Content is Prohibited !!