ದೇಶ-ವಿದೇಶ

ಕೊರೊನಾ ವಾರಿಯರ್ಸ್ ಗಳ 50ಲಕ್ಷ ವಿಮಾ ಯೋಜನೆ ವಿಸ್ತರಿಸಿದ ಕೇಂದ್ರ ಸರ್ಕಾರ

ನವದೆಹಲಿ : ಕೊರೊನಾ ವಾರಿಯರ್ಸ್‌ಗಳ 50 ಲಕ್ಷದ ವಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಒಂದು ವರ್ಷಗಳಿಗೆ ವಿಸ್ತರಣೆ ಮಾಡಿದೆ.

ಕಳೆದ ತಿಂಗಳು ಅವಧಿ ಮುಗಿದಿದ್ದು ಮಧ್ಯಂತರ ವ್ಯವಸ್ಥೆಯಾಗಿ ಏಪ್ರಿಲ್ 24ರವರೆಗೆ ವಿಸ್ತರಿಸಲಾಗಿದ್ದ ಕೋವಿಡ್ ವಾರಿಯರ್ಸ್ ಗಳ 50 ಲಕ್ಷ ರೂ. ವಿಮಾ ರಕ್ಷಣೆಯನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ.

ಹರಡುತ್ತಿರುವ ಸಾಂಕ್ರಾಮಿಕ ರೋಗದ ಬೃಹತ್ ಕೋವಿಡ್ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಕನಿಷ್ಠ 6 ತಿಂಗಳವರೆಗೆ ವಿಸ್ತರಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘವು ಆರೋಗ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಮನವಿ ಮಾಡಿತ್ತು.

ಹಿಂದಿನ ವರ್ಷದ ಕೋವಿಡ್ 19 ಪರಿಹಾರ ಪ್ಯಾಕೇಜ್‌ನ ಅಂಗವಾಗಿ ಘೋಷಣೆ ಮಾಡಿದ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್‌ನಡಿ ಮಾರ್ಚ್ 24ರಂದು ಮುಕ್ತಾಯಗೊಂಡಿತು

ಇದೀಗ ಈ ಪ್ಯಾಕೇಜ್ ಅನ್ನು ಮುಂದುವರೆಸಿದ್ದು ಸುಮಾರು 22 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತಾ ಬಲ ನೀಡುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Related posts

ಔರಂಗಾಬಾದ್: ಗೂಡ್ಸ್ ರೈಲು ಚಲಿಸಿ ಹಳಿಗಳ ಮೇಲೆ ಮಲಗಿದ್ದ 16 ವಲಸೆ ಕಾರ್ಮಿಕರ ಸಾವು

Upayuktha

ರಾಜ್ಯ ಸರ್ಕಾರದಿಂದ ನೇರ ರೈತರ ಖಾತೆಗೆ 4 ಸಾವಿರ ರೂ. ಹಣ ವರ್ಗಾವಣೆ

Harshitha Harish

‘ರಾಮಾಯಣ’ದ ಶ್ರೀರಾಮ- ಅರುಣ್ ಗೋವಿಲ್ ಬಿಜೆಪಿಗೆ ಸೇರ್ಪಡೆ

Upayuktha