
ಹೊಸದಿಲ್ಲಿ: ತೀವ್ರ ಮಳೆಯಿಂದ ಸಾವಿರಾರು ಕೋಟಿ ರೂ.ಗಳ ಹಾನಿ ಅನುಭವಿಸಿರುವ ಕರ್ನಾಟಕಕ್ಕೆ ಕೇಂದ್ರ ಸರಕಾರ 1,200 ಕೋಟಿ ರೂ.ಗಳ ಪರಿಹಾರ ಮಂಜೂರು ಮಾಡಿದೆ. ಇದೇ ವೇಳೆ ಬಿಹಾರಕ್ಕೂ 400 ಕೋಟಿ ರೂ.ಗಳ ಪರಿಹಾರಕ್ಕೆ ಅನುಮೋದನೆ ನೀಡಿದೆ.
ಹಾನಿಗೆ ತುತ್ತಾದ ನಾನಾ ರಾಜ್ಯಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳ ಪರಾಮರ್ಶೆ ನಡೆಸಿದ ಕೇಂದ್ರ ಗೃಹಸಚಿವ ಅಮಿತ್ ಶಾ, ಒಟ್ಟು 1,600 ಕೋಟಿ ರೂ.ಗಳ ಪರಿಹಾರ ಧನ ಮಂಜೂರು ಮಾಡಿದ್ದಾರೆ.
ಕರ್ನಾಟಕ ಮತ್ತು ಬಿಹಾರದ ರಾಜ್ಯ ವಿಕೋಪ ಪ್ರತಿಸ್ಪಂದನಾ ನಿಧಿ (ಎಸ್ಡಿಆರ್ಎಫ್) ಯಲ್ಲಿ ಲಭ್ಯವಿರುವ ಹಣದ ಅಂದಾಜು ನಡೆಸಿದ ಬಳಿಕ ಗೃಹಸಚಿವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಕರ್ನಾಟಕಕ್ಕೆ 1,200 ಕೋಟಿ ರೂ ಮತ್ತು ಬಿಹಾರಕ್ಕೆ 400 ಕೋಟಿ ರೂ.ಗಳನ್ನು ಮಂಜೂರು ಮಾಡಿದರು.
People of state are humiliated with the allocation of ₹1200cr as against the state govt assessment of ₹35000cr
This shows that the centre has zero confidence on @BSYBJP govt & doesn't believe him
Kannadigas patience is put to severe test from @narendramodi on a regular basis!
— Karnataka Congress (@INCKarnataka) October 4, 2019
ನೈಋತ್ಯ ಮುಂಗಾರಿನ ಅವಧಿಯಲ್ಲಿ 13 ರಾಜ್ಯಗಳು ಭಾರೀ ಮಳೆ, ಪ್ರವಾಹ, ಭೂಕುಸಿತದಂತಹ ವಿಕೋಪಗಳಿಗೆ ತುತ್ತಾಗಿದ್ದವು.
ಆಗಸ್ಟ್ 19ರಂದು ಕೇಂದ್ರ ಗೃಹಸಚಿವರು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ, ರಾಜ್ಯ ಸರಕಾರಗಳಿಂದ ಅಧಿಕೃತ ನೆರವಿನ ಕೋರಿಕೆ ಬರುವುದಕ್ಕೂ ಮೊದಲೇ ಎನ್ಡಿಆರ್ಎಫ್ ನಿಧಿಯಿಂದ ಹೆಚ್ಚುವರಿ ಹಣ ಒದಗಿಸಲು ತೀರ್ಮಾನಿಸಿದ್ದರು.