ಚಂದನವನ- ಸ್ಯಾಂಡಲ್‌ವುಡ್ ಸಿನಿಮಾ-ಮನರಂಜನೆ

ಮುಕ್ಕಾಲು ಭಾಗ ಚಿತ್ರೀಕರಣ ಮುಗಿಸಿದ ‘ಚಡ್ಡಿದೋಸ್ತ್’ಗಳು

ಚಿತ್ರೀಕರಣ ದೃಶ್ಯ

ಸೆವೆನ್‌ರಾಜ್ ನಿರ್ಮಾಣದಲ್ಲಿ ಆಸ್ಕರ್ ಕೃಷ್ಣ ಮೊದಲ ಬಾರಿಗೆ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ ಬಿಟ್ಟ’ ಚಿತ್ರವು ಸುಮಾರು ಮುಕ್ಕಾಲು ಭಾಗದಷ್ಟು ಚಿತ್ರೀಕರಣವನ್ನು ಮುಗಿಸಿಕೊಂಡಿದೆ.

Advertisement
Advertisement

ಲಾಕ್‌ಡೌನ್ ನಂತರದ ಮೊದಲ ಚಿತ್ರವಾಗಿ ಮುಹೂರ್ತ ಆಚರಿಸಿಕೊಂಡ ಈ ಚಿತ್ರವು ಈಗ ಅಂತಿಮ ಹಂತದ ಚಿತ್ರೀಕರಣಕ್ಕೆ ಬಂದು ನಿಂತಿದೆ. ಖ್ಯಾತ ಕಾದಂಬರಿಕಾರ ಕೌಂಡಿನ್ಯ ಅವರ ‘ಮೈ ಡಿಯರ್ ಫ್ರೆಂಡ್’ ಕಾದಂಬರಿಗೆ ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಚಿತ್ರದಲ್ಲಿ ಒಂದು ವಿಶೇಷ ಪಾತ್ರವನ್ನು ನಿಭಾಯಿಸಿದ್ದಾರೆ ನಟ ಲೋಕೇಂದ್ರ ಸೂರ್ಯ. ಮಲಯಾಳಿ ನಟಿ ಗೌರಿ ನಾಯರ್ ಚಿತ್ರದ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದು, ನಿರ್ಮಾಪಕ ಸೆವೆನ್ ರಾಜ್ ಅವರೂ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರು, ಕುಣಿಗಲ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಮುಂದಿನ ಭಾಗದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆ. ಚಿತ್ರಕ್ಕೆ ಗಗನ ಕುಮಾರ್ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ, ಮರಿಸ್ವಾಮಿ ಸಂಕಲನ, ವೈಲೆಂಟ್ ವೇಲು ಸಾಹಸ ನಿರ್ದೇಶನ, ಅಕುಲ್ ಅವರು ನೃತ್ಯ ನಿರ್ದೇಶನ, ಶ್ರೀಧರ್ ಸಿಯಾ ಹಾಗೂ ಕೃಷ್ಣಕುಮಾರ್ ಸಹ ನಿರ್ದೇಶನ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Advertisement
Advertisement

Related posts

ನೆನಪು: ಕನ್ನಡದ ‘ನಟ ಭಯಂಕರ’ ದಿವಂಗತ ವಜ್ರಮುನಿಗೆ ಇಂದು 76ನೇ ಜನುಮದಿನ

Upayuktha

ರಾಮಾಯಣವೆಂಬ ಮಹಾಯಾನ: ವೀಕ್ಷಕರನ್ನು ತ್ರೇತಾಯುಗಕ್ಕೆ ಕರೆದೊಯ್ದ ಮಹಾ ದೃಶ್ಯಕಾವ್ಯ

Upayuktha

ಇಂದಿನ ಐಕಾನ್- ಕನ್ನಡದ ಚಾರಿತ್ರಿಕ ನಟ ದತ್ತಣ್ಣ (H.G. ದತ್ತಾತ್ರೇಯ)

Upayuktha
error: Copying Content is Prohibited !!