ಚಂದನವನ- ಸ್ಯಾಂಡಲ್‌ವುಡ್ ರಾಜ್ಯ

ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿ ಅಮೂಲ್ಯ, ನಟ ದರ್ಶನ್ ಭರ್ಜರಿ ಮತಯಾಚನೆ

ಬೆಂಗಳೂರು: ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಪ್ರಚಾರಕ್ಕೆ ಸಿನಿಮಾ ನಟ ನಟಿಯ ಮೆರುಗು ಸಿಕ್ಕಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್​ ಹಾಗೂ ನಟಿ ಅಮೂಲ್ಯ ಅವರು ಶುಕ್ರವಾರ ಭರ್ಜರಿ ಮತಯಾಚನೆ ನಡೆಸಿದ್ದಾರೆ.

ಹಾಗೆ ಅಭಿಮಾನಿಗಳತ್ತ ಕೈ ಬೀಸಿ ಮುನಿರತ್ನ ಪರ ದರ್ಶನ್ ಹಾಗೂ ಅಮೂಲ್ಯ ಮತಯಾಚನೆ ಮಾಡಿದರು. ಜೊತೆಗೆ ರ್ಯಾಲಿ ಯಲ್ಲಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಕೂಡ ಭಾಗವಹಿಸಿರುವುದು ಕಂಡು ಬಂದಿದೆ.

ನಟ ದರ್ಶನ್ ಹಾಗೂ ನಟಿ ಅಮೂಲ್ಯ ಇಬ್ಬರಿಗೂ ಬೌನ್ಸರ್ಸ್ ಹಾಗೂ ಪೊಲೀಸರು ಫುಲ್ ಭದ್ರತೆ ನೀಡಲಾಗಿದೆ.

ಹಾಗೆಯೇ ಮತ ಪ್ರಚಾರಕ್ಕೆ ಬಂದ ನಟ, ನಟಿ ಅವರನ್ನು ಕಾಣಲು ರಸ್ತೆಯಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ರ್ಯಾಲಿ ವೇಳೆ ರಸ್ತೆ ಮಧ್ಯದಲ್ಲಿ ದರ್ಶನ್​ಗೆ ಮಹಿಳೆಯರು ಆರತಿ ಮಾಡಿದರು.

ಕ್ಷೇತ್ರದ ಬಿ.ಕೆ. ನಗರದ ಮೂಲಕ ಜೆ.ಪಿ. ಪಾರ್ಕ್ ಕಡೆ ರ್ಯಾಲಿ ಸಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Related posts

ಆ.27ಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಪದಗ್ರಹಣ

Upayuktha

ಕೋಲಾರ ಜಿಲ್ಲೆಯ ಗೊಲ್ಲಹಳ್ಳಿ ಜನರ ಸ್ವಯಂಘೋಷಿತ ನಿರ್ಬಂಧ: ರಾಜ್ಯಕ್ಕೆ ಮಾದರಿ

Upayuktha

ರಾಜ್ಯದಲ್ಲಿ ಇಂದು ಒಂದೇ ದಿನ 48 ಕೊರೊನಾ ಪಾಸಿಟಿವ್

Upayuktha

Leave a Comment