ಸ್ಥಳೀಯ

ಚಂದನ ಸಾಹಿತ್ಯ ವೇದಿಕೆಯಿಂದ ದಸರಾ ಕವಿಗೋಷ್ಠಿ ಮತ್ತು ಸಾಹಿತ್ಯ ಕೃತಿಗಳ ಬಿಡುಗಡೆ ಕಾರ್ಯಕ್ರಮ

ಸುಳ್ಯ : ತಾಲೂಕಿನ ಚಂದನ ಸಾಹಿತ್ಯ ವೇದಿಕೆ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಂಸ್ಕೃತಿಕ -ಕಲಾ ಸಂಘದಿಂದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ಮತ್ತು ಎರಡು ಸಾಹಿತ್ಯ ಕೃತಿಗಳ ಬಿಡುಗಡೆ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರಾದ ಶ್ರೀ ಪಿ ಬಿ ಸುಧಾಕರ್ ರೈ ರವರು ವಹಿಸಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಂಸ್ಕೃತಿಕ ಕಲಾ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಎಮ್ ವೆಂಕಪ್ಪಗೌಡ ರವರು ಕಾರ್ಯಕ್ರಮ ಉದ್ಘಾಟಿಸಿದರು.

ಚೈತನ್ಯ ಸೇವಾಶ್ರಮದ ಶ್ರೀ ಯೋಗೀಶ್ವರಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ದಸರಾ ಕವಿಗೋಷ್ಠಿ -2020 ಅದ್ಯಕ್ಷತೆಯನ್ನು ಬೆಂಗಳೂರಿನ ಹಿರಿಯ ಸಾಹಿತಿಗಳಾದ ಶ್ರೀ ಹರಿ ನರಸಿಂಹ ಉಪಾಧ್ಯಾಯ ರವರು ವಹಿಸಿದ್ದರು.

ಸಾಹಿತಿ ಎಚ್ .ಭೀಮರಾವ್ ವಾಷ್ಠರ್ ಸಂಪಾದಕತ್ವದಲ್ಲಿ ಹೊರಬಂದ ಚಂದನ ಕವನ ಸಂಕಲನ ಕೃತಿಯನ್ನು ಮುಖ್ಯ ಅತಿಥಿಗಳಾದ ಚೆನ್ನರಾಯಪಟ್ಟಣದ ಖ್ಯಾತ ಕವಿ ಶ್ರೀ ಗೋವಿಂದರಾಜು ಬಿ ವಿ ರವರು ಬಿಡುಗಡೆ ಮಾಡಿದರು.

ಸ್ವಾಮೀಜಿ ರವರ ಗುರಿ ತೋರುವನು ಗುರು ಕೃತಿಯನ್ನು ಬಿಡುಗಡೆ ಮಾಡಲಾಯಿತು. ಇನ್ನೋರ್ವ ಮುಖ್ಯ ಅತಿಥಿಗಳಾದ ವೈಲೇಶ್ ಪಿ ಎಸ್ ಕೊಡಗು ರವರು ಶುಭ ಹಾರೈಸಿದರು. ಕವಯತ್ರಿ ಸುಜಯ ಕೃಷ್ಣ ಪಾಲ್ತಾಡು ರವರು ಉಪಸ್ಥಿತರಿದ್ದರು.

ವಿಶೇಷ ಸಾಧನೆ ಮಾಡಿದ ಸುದ್ದಿ ಸಮೂಹ ಸಂಸ್ಥೆಯ ಕಚೇರಿ ವ್ಯವಸ್ಥಾಪಕರಾದ ಶ್ರೀ ಯಶ್ವಿತ್ ಕಾಳಮ್ಮನೆ ಅವರಿಗೆ ಚಂದನ ಪತ್ರಿಕೋದ್ಯಮಿ ರತ್ನ ಪ್ರಶಸ್ತಿ ಮತ್ತು ಹಿರಿಯ ಸಾಹಿತಿ ಶ್ರೀ ಹರಿ ನರಸಿಂಹ ಉಪಾಧ್ಯಾಯ ಅವರಿಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ಯನ್ನು ಗಣ್ಯರು ನೀಡಿ ಸನ್ಮಾನಿಸಿ ಗೌರವಿಸಿದರು.

ಇನ್ನೋರ್ವ ಸಾಧಕ ಶ್ರೀ ಮಂಜುನಾಥ್ ಮೇಸ್ತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚಿಗೆ ನಿಧನರಾದ ಮೋಹನ್ ಸೋನಾ ಅವರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನ್ಯಾನೋ ಕಥಾ ಸ್ಪರ್ಧೆಯಲ್ಲಿ ಬಹುಮಾನಕ್ಕೆ ಆಯ್ಕೆಯಾದ ಕಥೆಗಾರರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ಗಳನ್ನು ನೀಡಲಾಯಿತು . ವಿಜಯ್ ಕುಮಾರ್ ಕಾಣಿಚಾರ್ ಅವರನ್ನು ದಸರಾ ಕವಿ ಎಂದು ಸನ್ಮಾನ ಮಾಡಲಾಯಿತು.

ದಸರಾ ಕವಿಗೋಷ್ಠಿಯಲ್ಲಿ ಒಟ್ಟು 30 ಕವಿಗಳು ಭಾಗವಹಿಸಿದ್ದರು . ವೈದ್ಯಾಧಿಕಾರಿ ಡಾ.ಸಾಯಿಗೀತಾ ರವರು ಪ್ರಾರ್ಥನೆ ಹಾಡಿದರು. ವಿಜಯ್ ಕುಮಾರ್ ಕಾಣಿಚಾರ್ ಸ್ವಾಗತಿಸಿದರು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮತ್ತು ಸಾಹಿತಿ ಹಾಗೂ ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ರವರು ಪ್ರಾಸ್ತಾವಿಕ ಮಾತನಾಡಿದರು.

ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ ಕೋಳಿವಾಡ ರವರು ವಂದನಾರ್ಪಣೆ ಮಾಡಿದರು. ಲತಾಶ್ರೀ ಸುಪ್ರೀತ್ ಮೊಂಟೆಡ್ಕ ರವರು ಕಾರ್ಯಕ್ರಮ ನಿರೂಪಿಸಿದರು .

Related posts

ಬೆಳ್ಳಾರೆ: ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ ಬೈಕ್ ಸವಾರ ಸಜೀವ ದಹನ

Harshitha Harish

ಬರೆಪ್ಪಾಡಿ, ಪಲ್ಲತ್ತಾರು, ಪೆರುವಾಜೆ ಕಾಮಗಾರಿ ಗೆ ನಳಿನ್ ಕುಮಾರ್ ಕಟೀಲ್ ಶಂಕುಸ್ಥಾಪನೆ

Harshitha Harish

ಬೆಳ್ತಂಗಡಿ: ಬಿಸಿಎಂ ವಿದ್ಯಾರ್ಥಿ ನಿಲಯದ 8 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

Sushmitha Jain