ಕತೆ-ಕವನಗಳು

*ಚಂದ್ರಘಂಟಾ*

ತೃತೀಯಾ ದೇವಿ ಚಂದ್ರಘಂಟ ಹಣೆಯ ಮೇಲೆ ಚಂದ್ರನ ಧರಿಸಿದವಳೇ, ಹುಲಿಯ ಮೇಲೆ ಕುಳಿತವಳೇ..

ದುರ್ಗಾ ಮಾತೆಯ ವಿವಾಹಿತ ರೂಪದವಳೇ, ಭಕ್ತರ ಇಷ್ಟಾರ್ಥ ನೆರವೇರಿಸಲು ಧರೆಗಿಳಿದು ಬಂದವಳೇ..

ದುಷ್ಟ ರಕ್ಕಸರ ಕೊಲ್ಲಲು ಹತ್ತು ಕೈಯಲ್ಲೂ ಆಯುಧವ ಹಿಡಿದವಳೇ, ಶುಕ್ರ ಗ್ರಹದ ಅಧಿಪತಿಯು ಅವಳೇ..

ಶಿವನ ವರಿಸಿ, ಮಂದಸ್ಮಿತೆಯಂತೆ ಕಾಣುವವಳೇ, ಭಕ್ತರ ಕಂಡರೆ ಆಶೀರ್ವದಿಸಿ ಸಕಲವನ್ನೂ ನೀಡುವವಳೇ..

ನವರಾತ್ರಿಯೊಳು ಅವಳಿಗರ್ಪಿಸಿದರೆ ಮಲ್ಲಿಗೆ ಹೂಗಳ ಮಾಲೆ, ಅವಳೆಮಗೆ ನೀಡುವಳು ಸುಖದ ಹೂ ಮಳೆ..

✍ *ನಾಗಶ್ರೀ. ಎಸ್. ಭಂಡಾರಿ*
*ಮೂಡುಬಿದಿರೆ*

ಚಿತ್ರ ಕೃಪೆ : *ಮಾನಸ ಫೋಟೋಗ್ರಫಿ*

Related posts

ಕವನ-ಗಾಯನ: ಮನದ ನೋವು

Upayuktha

ಜೈ ಗಣೇಶ ಜಯ ಗಣೇಶ

Harshitha Harish

ಭಯವಿದ್ದರೇನು ಫಲ

Harshitha Harish

Leave a Comment