ಮೊದಲ ಸಲ ಕಂಡಿರುವೆ
ನೀಲಿ ಕಂಗಳ ನಿನ್ನ ಚೆಲುವ
ಕಂಡು ನಾ ಗೀಚಿರುವೆ
ನಾಲ್ಕು ಸಾಲಿನ ಪದವ
ಇಬ್ಬನಿಯ ಸನಿಹದಿ
ನೀ ಬಂದರೆ ಪುಳಕ
ತಂಗಾಳಿಯ ತಂಪಿಗೆ
ನೀನಂದರೆ ಹರುಷ
ನಸು ನಗೆಯ ಚಿಲಕದಿ ನೀ
ಮಾಡಿರುವೆ ನೀ ನನ್ನಯ ಬಂಧನ
ಚಿತ್ತಾರದ ಆಗಸದಿ ನಾ ಕಂಡೆ
ಮಿನುಗುವ ಆ ನಿನ್ನ ನಯನ
ಮೊಂಬತ್ತಿಯ ದೀಪವು ಸಾಕ್ಷಿ
ನನ್ನ ಸ್ವಪ್ನಕ್ಕೆ ನಿನ್ನಯ ದೀವಿಗೆ
ನಾ ನನ್ನೇ ಕಳೆಯುವ ಸಮಯ
ನೀ ಬಂದು ನಿಂತಿರಲು ಸನಿಹ
ಬರಹ: ಯತೀ ಕುಲಾಲ್